ಅಮೆರಿಕ: ಹೈಸ್ಕೂಲಿನಲ್ಲಿ ಸಹಪಾಠಿಗೆ ಗುಂಡು ಹಾರಿಸಿ ಕೊಂದ ವಿದ್ಯಾರ್ಥಿ

0
703

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ನಾರ್ತ್ ಕರೊಲಿನದ ಹೈಸ್ಕೂಲಿನಲ್ಲಿ ಸಹಪಾಠಿಗೆ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಸಹಪಾಠಿ ಮೃತಪಟ್ಟಿದ್ದಾನೆ. ವಿನ್ಸಟನ್ ಸಲೋಮ್ ಮೌಂಟ್ ತಬೊರ್ ಹೈಸ್ಕೂಲಿನಲ್ಲಿ ಘಟನೆ ನಡೆದಿದೆ. ಗುಂಡೇಟು ತಗುಲಿದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವನು ಬದುಕಿ ಉಳಿಯಲಿಲ್ಲ. ಮೃತ ವಿದ್ಯಾರ್ಥಿಯ ವಯಸೆಷ್ಟೆಂದು ಪೊಲೀಸರು ಮಾಹಿತಿ ನೀಡಿಲ್ಲ.

ಶಾಲೆಯ ಇನ್ನೊಬ್ಬ ವಿದ್ಯಾರ್ಥಿ ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಘಟನೆ ನಡೆದು ಐದು ಗಂಟೆಯೊಳಗೆ ವಿದ್ಯಾರ್ಥಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಗುಂಡು ಹಾರಿಸಲು ಕಾರಣವೇನೆಂದು ಸ್ಪಷ್ಟವಾಗಿಲ್ಲ. ಒಂದು ವಾರದಲ್ಲಿ ನಾರ್ತ್ ಕರೊಲಿನದ ಶಾಲೆಯಲ್ಲಿ ನಡೆದ ಎರಡನೆ ಗುಂಡು ಹಾರಾಟ ಪ್ರಕರಣವಿದು.