ತಾನು ಸಂಸದೆ, ಶೌಚಾಲಯ ಶುಚಿಗೊಳಿಸುವವಳಲ್ಲ; ಬಿಜೆಪಿ ಕಾರ್ಯಕರ್ತರಿಗೆ ಉತ್ತರಿಸಿದ ಪ್ರಜ್ಞಾಸಿಂಗ್

0
535

ಭೋಪಾಲ್, ಜು. 22: ತನ್ನ ಪ್ರದೇಶದ ಕೆಟ್ಟುಹೋಗಿರುವ ಶೌಚಾಲಯಗಳ ಕುರಿತು ದೂರು ನೀಡಲು ಕರೆ ಮಾಡಿದ ಬಿಜೆಪಿ ಕಾರ್ಯಕರ್ತನಿಗೆ ಭೋಪಾಲ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅಪಮಾನಿಸಿದ್ದಾರೆ. ಶೌಚಾಲಯ ಮತ್ತು ಕೊಳಚೆ ನೀರನ್ನು ಶುಚಿಗೊಳಿಸಲು ತಾನು ಆಯ್ಕೆಯಾದವಳಲ್ಲ ಎಂದು ಠಾಕೂರ್ ಹೇಳಿದ್ದಾರೆ.

ನಾನು ಯಾಕೆ ಆಯ್ಕೆಯಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈ ವಿಷಯವನ್ನು ಈ ಹಿಂದೆಯೂ ಹೇಳಿದ್ದೆ. ಕ್ಷೇತ್ರದ ಒಟ್ಟು ಅಭಿವೃದ್ಧಿಗೆ ಶಾಸಕರು, ಮುನ್ಸಿಪಲ್ ಕೌನ್ಸಿಲರ್ ಸಹಿತ, ಸ್ಥಳೀಯಾಡಳಿತ ಪ್ರತಿನಿಧಿಗಳೊಂದಿಗೆ ಸಹಕರಿಸಿ ಕೆಲಸ ಮಾಡುವುದು ನನ್ನ ಹೊಣೆಗಾರಿಕೆ. ನನಗೆ ಕರೆ ಮಾಡುವ ಬದಲು ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪ್ರತಿನಿಧಿಗಳ ಮೂಲಕ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಪ್ರಜ್ಞಾ ಸಿಂಗ್ ಠಾಕೂರ್ ಎಂದು ಹೇಳಿದರು.

ಸೆಹೋರ್ ಎಂಬಲ್ಲಿನ ಬಿಜೆಪಿ ಕಾರ್ಯಕರ್ತ ಫೋನ್ ಕರೆ ಮಾಡಿದಾಗ ಪ್ರಜ್ಞಾ ಸಿಂಗ್ ಠಾಕೂರ್ ಈ ರೀತಿ ಹೇಳಿದರು. ನರೇಂದ್ರ ಮೋದಿ ಸರಕಾರದ ಸ್ವಚ್ಛ ಭಾರತ್ ಯೋಜನೆಯನ್ನು ಎತ್ತಿ ತೋರಿಸುತ್ತಿರುವ ವೇಳೆಯೇ ಪ್ರಜ್ಞಾಸಿಂಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಠಾಕೂರ್ ಆರೋಪಿಯಾಗಿದ್ದಾರೆ.

ಮಹಾತ್ಮಾಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶ ಭಕ್ತ ಎಂದು ಹೇಳುವ ಮೂಲಕ ಅವರು ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರಮೋದಿ ತಳ್ಳಿಹಾಕಿದ್ದು ಯಾವತ್ತೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದರು.