ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 28: ದೇಶ ಅಪಾಯದ ಸ್ಥಿತಿಯಲ್ಲಿ ಹಾದು ಹೋಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರತಿಪಕ್ಷ ಪಾರ್ಟಿಗಳು ಇದರ ವಿರುದ್ಧ ಸರಿಯಾಗಿ ಧ್ವನಿಯೆತ್ತಿಲ್ಲ. ಆದರೆ ನಾವು ಹೆದರುವುದಿಲ್ಲ. ನಿರಂತರ ಎನ್ಆರ್ ಸಿ, ಸಿಎಎಯ ವಿರುದ್ಧ ಪ್ರತಿಭಟಟೆ ಮಾಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು. ಸಿಐಎ, ಎನ್ಆರ್ ಸಿ ಸಂವಿಧಾನ ವಿರೋಧಿಯಾಗಿದೆ. ಪ್ರತಿಪಕ್ಷಗಳನ್ನು ಹೆದರಿಸಲು ಶ್ರಮಿಸಲಾಗುತ್ತಿದೆ ಎಂದು ಪ್ರಿಯಾ೦ಕಾ ಗಾಂಧಿ ಆರೋಪಿಸಿದರು. ಲಕ್ನೊದಲ್ಲಿ ನಡೆದ ಕಾಂಗ್ರೆಸ್ನ 135ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಪ್ರಿಯಾಂಕಾ ಹೇಳಿದರು.












