ಅಕ್ರಮವೆಸಗಿದ್ದು 498 ಮಂದಿ: ಯು ಪಿ ಪೊಲೀಸ್

0
366

ಸನ್ಮಾರ್ಗ ವಾರ್ತೆ-

ಲಕ್ನೊ, ಡಿ. 27: ಪೌರತ್ವ ಕಾನೂನು ತಿದ್ದುಪಡಿಯನ್ನು ಪ್ರತಿಭಟಿಸುವ ವೇಳೆ ಅಕ್ರಮವೆಸಗಿದ್ದವರನ್ನು ನಾವು ಗುರುತಿಸಿದ್ದೇವೆ ಎಂದು ಉತ್ತರಪ್ರದೇಶ ಪೊಲೀಸ್ ಹೇಳಿಕೊಂಡಿದೆ. 498 ಮಂದಿ ಹಿಂಸಾಚಾರ ಮಾಡಿದ್ದು, ಅವರನ್ನು ಗುರುತಿಸಲಾಗಿದ್ದು, ಲಕ್ನೊ, ಮೀರತ್ ,ಸಂಭಾಲ್, ರಾಮಪುರ, ಮುಝಪ್ಫರ್ ನಗರ, ಫಿರೋಝಾಬದ್, ಕಾನ್‍ಪುರ ನಗರ, ಬುಲಂದ್‍ಶಹರ್ ಗಳಲ್ಲಿ ನಡೆದ ಹಿಂಸಾಚಾರಗಳಲ್ಲಿ ಇವರು ಶಾಮಿಲಾಗಿದ್ದರು. ಇದೇವೇಳೆ ಅಕ್ರಮ ಘಟನೆಗಳಿಗೆ ಸಂಬಂಧಿಸಿ 318 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ ಎನ್‍ಡಿಟಿವಿಯ ರವೀಶ್‍ಕುಮಾರ್ ಒಂಬೈನೂರಕ್ಕೂ ಹೆಚ್ಚು ಮಂದಿಯ ಬಂಧನವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪುನಃ ಪ್ರತಿಭಟನೆ ಬಲಪಡುವ ಸಾಧ್ಯತೆ ಕಂಡು ಹದಿನಾಲ್ಕು ಜಿಲ್ಲೆಯಲ್ಲಿ ಉತ್ತರ ಪ್ರದೇಶ ಸರಕಾರ ಇಂಟರ್ ನೆಟ್ ಬಂದ್ ಮಾಡಿದೆ. ಬೆಳಗ್ಗೆ ಎಂಟರಿಂದ ಸಂಜೆ ಆರರವರೆಗೆ ನಿಷೇಧಾಜ್ಞೆಯಿದೆ. ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್, ಬುಲಂದ್ ಶಹರ್, ಆಗ್ರ ಫಿರೋಝಾ ಬದ್ ಅಲಿಗಡ, ಗಾಝಿಯಾಬಾದ್, ಸಂಭಾಲ್, ಮುಝಪ್ಫರ್ ನಗರಗಳಲ್ಲಿ ಇಂಟರ್ ನೆಟ್ ನಿಷೇಧಿಸಲಾಗಿದೆ.