ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಗುಲಾಮ್ ನಬಿ ಆಝಾದ್

0
208

ಸನ್ಮಾರ್ಗ ವಾರ್ತೆ

ಶ್ರೀನಗರ: ಗುಜರಾತ್‍ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ. ಆಮ್ ಆದ್ಮಿ ದಿಲ್ಲಿಯಲ್ಲಿ ಮಾತ್ರ ಸೀಮಿತವಾಗಿದ್ದು ಅದು ಹೊರಗೆ ಮ್ಯಾಜಿಕ್ ಮಾಡಲಾರದು ಎಂದು ಅವರು ಹೇಳಿದರು.

ದಶಕಗಳ ಸಂಬಂಧವನ್ನು ಕಡಿದುಕೊಂಡು ಕಾಂಗ್ರೆಸ್‍ನಿಂದ ಹೊರ ಬಂದ ಆಝಾದ್ ತಾನು ಕಾಂಗ್ರೆಸ್ ಪಾರ್ಟಿಯ ಆಶಯಕ್ಕೆ ವಿರೋಧವಾಗಿಲ್ಲ ಪಾರ್ಟಿಯ ವ್ಯವಸ್ಥೆ ದುರ್ಬಲವಾದುದ್ದನ್ನು ಮಾತ್ರ ತಾನು ವಿರೋಧಿಸುತ್ತಿರುವುದಾಗಿ ಆಝಾದ್‌ರವರು ಶ್ರೀನಗರದಲ್ಲಿ ಎನ್‍ಐಎಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಉತ್ತಮ ಪ್ರತಿಸ್ಪರ್ಧೆ ನೀಡಿ ಗೆಲ್ಲುತ್ತದೆ ಎಂದು ಭಾವಿಸಿರುವೆ. ಅದು ಆಮ್ ಆದ್ಮಿ ಪಾರ್ಟಿಯಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಪುನಃ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ನೀಡಿದ ಸೂಚನೆ ಕುರಿತು ಕೇಳಿದಾಗ. ಈ ವಿಷಯವನ್ನು ಹಲವು ಸಲ ಕೇಂದ್ರ ಸರಕಾರದ ಮುಂದಿಟ್ಟಿದ್ದೆ. ಅದನ್ನು ಜಾರಿಗೆ ತರುವುದಾದರೆ ಸ್ವಾಗತಾರ್ಹ ಎಂದು ಹೇಳಿದರು.

ಆಗಸ್ಟ್ 26ರಂದು ಆಝಾದ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದು, ಅಕ್ಟೋಬರ್‌ನಲ್ಲಿ ಡೆಮಕ್ರಾಟಿಕ್ ಆಝಾದ್ ಪಾರ್ಟಿಯನ್ನು ಘೋಷಿಸಿದ್ದರು. ಕಾಂಗ್ರೆಸ್ ನೇತೃತ್ವದೊಂದಿಗೆ ಅಸಂತೃಪ್ತಿ ಅವರ ರಾಜೀನಾಮೆ‌ಗೆ ಕಾರಣವಾಗಿತ್ತು.