ಆಕ್ಸಿಜನ್ ಕೊರತೆಯಿಂದ ನಾಲ್ಕು ರೋಗಿಗಳು ಪಂಜಾಬಿನಲ್ಲಿ ಮಾತ್ರ ಮೃತರಾಗಿದ್ದಾರೆ: ಕೇಂದ್ರ ಸರಕಾರದಿಂದ ವಿಚಿತ್ರ ವಾದ!

0
259

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಕೊರೋನ ಎರಡನೆಯ ಅಲೆಯಲ್ಲಿ ಆಕ್ಸಿಜನ್ ಸಿಗದೆ ಪಂಜಾಬಿನಲ್ಲಿ ಮಾತ್ರ ರೋಗಿಗಳು ಮೃತಪಟ್ಟಿರವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್‍ಸೂಖ್ ಮಾಂಡವಿಯಾ ಲೋಕಸಭೆಯಲ್ಲಿ ಹೇಳಿದರು. ಕೊರೋನ ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾದ ಸಾವು ನೋವುಗಳ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.

ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟವರ ಲೆಕ್ಕವನ್ನು ಕೇಳಿ ರಾಜ್ಯಗಳಿಗೆ ಪತ್ರ ಬರೆಯಲಾಗಿತ್ತು. ಈ ಕುರಿತು 19 ರಾಜ್ಯಗಳು ಉತ್ತರಿಸಿದ್ದು, ಇದರಲ್ಲಿ ಪಂಜಾಬಿನಲ್ಲಿ ಮಾತ್ರ ಆಕ್ಸಿಜನ್ ಕೊರತೆಯಿಂದಾಗಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಮಾಂಡವಿಯಾ ತಿಳಿಸಿದರು. ಮಾತ್ರವಲ್ಲ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಆಕ್ಸಿಜನ್ ಹೆಸರಿನಲ್ಲಿ ದೇಶದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಸಚಿವರು ಆರೋಪಿಸಿದರು. ಈಗ ಆಕ್ಸಿಜನ್ ಪ್ಲಾಂಟ್ ಸಂಪೂರ್ಣ ಕಾರ್ಯನಿರತವಾಗಿವೆ. ಈಗ ದೇಶದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಅವರು ಹೇಳಿದರು.