ಸನ್ಮಾರ್ಗ ವಾರ್ತೆ
ನವದೆಹಲಿ: 101 ಸಾರ್ವಜನಿಕ ವಲಯದ ಘಟಕಗಳು(PSU’s) ಪಿಎಂ ಕೇರ್ಸ್ ಕೋವಿಡ್ -19 ಪರಿಹಾರ ನಿಧಿಗೆ ಸಿಬ್ಬಂದಿಗಳ ವೇತನದಿಂದ ಸುಮಾರು 155 ಕೋಟಿ ಕೊಡುಗೆ ನೀಡಿವೆ ಎಂಬ ಮಾಹಿತಿಯು ಇಂಡಿಯನ್ ಎಕ್ಸ್‌ಪ್ರೆಸ್ ಆರ್‌ಟಿಐ ಮೂಲಕ ಪಡೆದ ದಾಖಲೆಗಳಲ್ಲಿ ಬಹಿರಂಗವಾಗಿದೆ.
ಈ ಮೊತ್ತವು ಈ ಹಿಂದೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನಿಧಿಯಿಂದ PSU’sಗಳು ನೀಡಿದ 32,422.8ಕೋಟಿ ರೂಪಾಯಿ ದೇಣಿಗೆಯ ಭಾಗವಲ್ಲ ಎಂಬುದು ತಿಳಿದುಬಂದಿದೆ.
ತೈಲೋತ್ಪಾದಕ ಒಎನ್‌ಜಿಸಿ ಸಿಬ್ಬಂದಿಗಳ ಸಂಬಳದಿಂದ *29.06 ಕೋಟಿ ನೀಡಿದರೆ, ನಷ್ಟದಲ್ಲಿ ಸಾಗುತ್ತಿರುವ ಬಿಎಸ್‌ಎನ್‌ಎಲ್ ಕೂಡ ಸಿಬ್ಬಂದಿಗಳ ಸಂಬಳದಿಂದ 311.43 ಕೋಟಿ ದೇಣಿಗೆ ನೀಡಿರುವುದು ಬಹಿರಂಗವಾಗಿದೆ.












