ಹಿಝ್ಬುಲ್ಲಾಗೆ ಪೇಜರ್‌; ಕೇರಳ ಕಂಪನಿಯ ಪಾತ್ರ: ತನಿಖೆಗೆ ಆದೇಶಿಸಿದ ಬಲ್ಗೇರಿಯಾ

0
101

ಸನ್ಮಾರ್ಗ ವಾರ್ತೆ

ಲೆಬನಾನಿನಲ್ಲಿ ದಿನಗಳ ಹಿಂದೆ ಪೇಜರುಗಳು ಸ್ಪೋಟಗೊಂಡಿದ್ದು ಇದರ ಹಿಂದೆ ಕೇರಳದ ವ್ಯಕ್ತಿ ಒಬ್ಬರ ಕಂಪನಿಯ ಪಾತ್ರ ಇದೆ ಎಂದು ಹೇಳಲಾಗಿದೆ. ಈ ಕುರಿತಂತೆ ಬಲ್ ಗೇರಿಯಾ ತನಿಖೆಗೆ ಆದೇಶಿಸಿದೆ. ಹಿಝ್ಬುಲ್ಲಾಗೆ ಪೇಜರುಗಳನ್ನು ನೀಡಿರುವುದರಲ್ಲಿ ಕೇರಳೀಯ ಮತ್ತು ನಾರ್ವೆ ಪೌರನಾದ ರಿನ್ಸ್ ಜೋಸ್ ನ ಕಂಪನಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

ಬಲ್ಗೆರಿಯಾದಲ್ಲಿ ನೋಂದಣಿಯಾಗಿರುವ ನಾರ್ತ್ ಗ್ಲೋಬಲ್ ಲಿಮಿಟೆಡ್ ಎಂಬ ಕಂಪನಿಯ ಒಡೆಯರಾಗಿದ್ದಾರೆ ಈ ಜೋಸ್. ಇವರು ವಯನಾಡಿನವರು.. ಆದರೆ ಪೇಜರ್ ನಲ್ಲಿ ಸ್ಪೋಟಕಗಳನ್ನು ಇಸ್ರೇಲ್ ಇರಿಸಿರುವ ಬಗ್ಗೆ ಈ ಜೋಸ್ ಗೆ ಗೊತ್ತಿಲ್ಲ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ. ಇದನ್ನು ತಯಾರಿಸಿದ ಕಂಪನಿಯ ಜೊತೆ ಈ ಕಂಪನಿಗೆ ಒಡನಾಟ ಇದೆ ಎಂದು ಹೇಳಲಾಗಿದೆ.

ತೈವಾನ್ ನಿಂದ ಪೇಜರುಗಳನ್ನು ತಂದು ಹಿಝ್ಬುಲ್ಲಾಗೆ ಕೊಟ್ಟಿರುವುದು ಇವರ ಕಂಪನಿ ಎಂದು ಹೇಳಲಾಗುತ್ತಿದೆ. ಪೇಜರುಗಳನ್ನು ಈ ಜೋಸ್ ಅವರ ಕಂಪನಿಯೇ ತಯಾರಿಸಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಜೋಸ್ ತಪ್ಪು ಮಾಡಿದ್ದಾರೆಂದು ನಮಗೆ ಅನಿಸುತ್ತಿಲ್ಲ ಆತನನ್ನು ಯಾರೋ ವಂಚಿಸಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.