ಕೇರಳ ಉಪಚುನಾವಣೆ: ಪಾಲಾ ವಿಧಾನಸಭಾ ಸೀಟು ಎಲ್‍ಡಿಎಫ್‍ ತೆಕ್ಕೆಗೆ

0
903

ಸನ್ಮಾರ್ಗ ವಾರ್ತೆ

ಪಾಲ,ಸೆ.27: ಕೇರಳ ಕಾಂಗ್ರೆಸ್‌ನ ಕೆಎಂ ಮಾಣಿ ನಿಧನರಾಗಿ ತೆರವಾದ ಪಾಲಾ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಲ್‍ಡಿಎಫ್ ಅಭ್ಯರ್ಥಿ ಮಾಣಿ ಸಿ.ಕಾಪ್ಪನ್ ಗೆಲುವು ಸಾಧಿಸಿದ್ದಾರೆ. ತನ್ನ ನಿಕಟ ಸ್ಪರ್ಧಿ ಯುಡಿಎಫ್‍ನ ಅಭ್ಯರ್ಥಿ, ಕೇರಳ ಕಾಂಗ್ರೆಸ್‍ನ ಜೋಸ್ ಟೋಮ್‍ರನ್ನು 2,943 ಮತಗಳಿಂದ ಸೋಲಿಸಿದ್ದಾರೆ. ಯುಡಿಎಫ್ ಕೋಟೆಯಾದ ಪಾಲದಲ್ಲಿ ಉಪಚುನಾವಣೆಯಲ್ಲಿ ಅದಕ್ಕೆ ಭಾರೀ ಮುಖಭಂಗ ಅನುಭವಿಸಬೇಕಾಗಿ ಬಂದಿದೆ.

2016ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 1,3,775 ಮತಗಳಲ್ಲಿ ಯುಡಿಎಫ್ ಅಭ್ಯರ್ಥಿ ಕೆಎಂ ಮಾಣಿ 58,884 ಮತಗಳಿಸಿದ್ದರೆ ನಿಕಟ ಸ್ಪರ್ಧಿ ಮಾಣಿ ಸಿ ಕಾಪ್ಪನ್ 54,181 ಮತಗಳನ್ನು ಗಳಿಸಿದ್ದರು. ಎನ್‌ಡಿಎ 24821 ಮತಗಳನ್ನು ಗಳಿಸಿತ್ತು. ನಿಧನರಾದ ಕೇರಳ ಕಾಂಗ್ರೆಸ್‍ನ ಕೆಎಂ ಮಾಣಿ ಇಲ್ಲಿ ಐವತ್ತೈದು ವರ್ಷ ಶಾಸಕರಾಗಿದ್ದರು. ಇಂತಹ ಪ್ರಭಾವಿ ಕ್ಷೇತ್ರ ಅವರ ನಿಧನಾನಂತರ ಯುಡಿಎಫ್‍ನ ಕೈ ಸೇರಿದೆ. ಬದಲಾಗಿ ಅವರ ನಿಕಟ ಪ್ರತಿಸ್ಪರ್ಧಿ ಮಾಣಿ ಕೆ ಕಾಪ್ಪನ್ ಜಯಭೇರಿ ಬಾರಿಸಿದ್ದಾರೆ.ಕೇರಳ ಕಾಂಗ್ರೆಸ್‍ನಲ್ಲಿ ಈಗ ಉದ್ಭವಿಸಿರುವ ಜೋಸ್-ಜೋಸೆಫ್ ಬಣಗಳ ನಡುವಿನ ಕಲಹ ಸೋಲಿಗೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.