ಇಸ್ರೇಲಿನ ಉನ್ನತ ಕಮಾಂಡರ್ ದಖ್ಸಾ ರನ್ನು ಹತ್ಯೆಗೈದ ಫೆಲೆಸ್ತೀನಿ ಹೋರಾಟಗಾರರು: ರಫಾ ನಿರಾಶ್ರಿತ ಶಿಬಿರದಲ್ಲಿ ಮಾರಣಹೋಮ ನಡೆಸಿದ ಕರ್ನಲ್

0
491

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ಹತ್ಯೆಗೀಡಾದ ಇಸ್ರೇಲ್ ನ 401ನೇ ಬ್ರಿಗೇಡಿನ ಕಮಾಂಡರ್ ಮತ್ತು ಮುಂಚೂಣಿ ಸೇನಾ ದಂಡನಾಯಕನಾಗಿರುವ ಕರ್ನಲ್ ಇಹ್ ಸಾನ್ ದಖ್ ಸಾ, ಇಸ್ರೇಲಿನ ಅತಿ ಕ್ರೂರ ಸೈನಿಕರಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.

ಮಕ್ಕಳು ಮತ್ತು ಮಹಿಳೆಯರು ಸಹಿತ ಲಕ್ಷಾಂತರ ಮಂದಿ ವಾಸಿಸುತ್ತಿದ್ದ ಜನದಟ್ಟನೆಯ ರಫಾ ನಿರಾಶ್ರಿತ ಶಿಬಿರದ ಮೇಲೆ ಆಕ್ರಮಣ ನಡೆಸಿ ನೂರಾರು ಮಂದಿಯ ಸಾವಿಗೆ ಕಾರಣವಾದ ಸೇನಾಕ್ರಮಣದ ನೇತೃತ್ವವನ್ನು ಇವರು ವಹಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಲಕ್ಷಕ್ಕಿಂತಲೂ ಅಧಿಕ ಫೆಲೆಸ್ತೀನಿಯರನ್ನು ಸುತ್ತುವರಿದು ಅಕ್ಷರಶ ಬಂಧಿಗಳಂತೆ ನಡೆಸಿಕೊಂಡಿರುವ ಜಬಲಿಯ ನಿರಾಶ್ರಿತ ಶಿಬಿರದಲ್ಲಿ ಈ ದಖ್ಸಾ ಹತ್ಯೆಗೀಡಾಗಿದ್ದಾರೆ. ಇಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ವೇಳೆ ಫೆಲೆಸ್ತೀನಿ ಹೋರಾಟಗಾರರು ಸ್ಪೋಟಕವನ್ನು ಎಸೆದು ಅವರನ್ನು ಹತ್ಯೆ ಮಾಡಿದ್ದಾರೆ. ಯುದ್ಧ ಟ್ಯಾಂಕರ್ ನಿಂದ ಅವರು ಇಳಿಯುತ್ತಿದ್ದ ವೇಳೆ ಸ್ಪೋಟ ಸಂಭವಿಸಿದೆ ಮತ್ತು ಅವರು ತಕ್ಷಣ ಸಾವಿಗಿಡಾಗಿದ್ದಾರೆ. ಅವರ ಜೊತೆಗಿದ್ದ ಇನ್ನಿಬ್ಬರು ಯೋಧರು ಮತ್ತು ಓರ್ವ ಕಮಾಂಡರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಝಾ ಹೋರಾಟದಲ್ಲಿ ಸಾವಿಗೀಡಾದ ಇಸ್ರೇಲ್ ನ ಅತಿ ಉನ್ನತ ಕಮಾಂಡರ್ ಇವರಾಗಿದ್ದಾರೆ. ಇವರ ನಿಧನವು ಇಸ್ರೇಲ್ ನ ಪಾಲಿಗೆ ದೊಡ್ಡ ನಷ್ಟವಾಗಿದೆ ಎಂದು ಇಸ್ರೇಲ್ ಅಧ್ಯಕ್ಷರು ಹೇಳಿದ್ದಾರೆ.