ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ ಫೆಲೆಸ್ತೀನಿಯನ್ ಬಾಲಕ ಬಲಿ

0
484

ಸನ್ಮಾರ್ಗ ವಾರ್ತೆ

ವೆಸ್ಟ್ ಬ್ಯಾಂಕ್, ಮೇ. 14: ಇಸ್ರೇಲಿನ ಸೇನೆಯ ಗುಂಡಿಗೆ ಫೆಲೆಸ್ತೀನಿನ ಹದಿಹರೆಯದ ಬಾಲಕನೋರ್ವ ಕೊಲ್ಲಲ್ಪಟ್ಟಿದ್ದಾನೆ. ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕಿನ ನಿರಾಶ್ರಿತ ಶಿಬಿರದ ಸಮೀಪದಲ್ಲಿ ಘಟನೆ ನಡೆದಿದೆ.

ಝೈದ್ ಫಾದಿಲ್ ಎಂಬ ಹದಿನೈದು ವರ್ಷದ ಹುಡುಗ ಬಲಿಯಾಗಿರು ವ್ಯಕ್ತಿಯಾಗಿದ್ದು ತಲೆಗೆ ಗುಂಡು ತಗಲಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಫೆಲಸ್ತೀನಿಯರೊಂದಿಗೆ ಇಲ್ಲಿ ಇಸ್ರೇಲ್ ಸೇನೆ ಘರ್ಷಣೆಗಿಳಿದಿತ್ತು. ನಂತರ ನಡೆದಿರುವ ಗುಂಡು ಹಾರಾಟದಲ್ಲಿ ಓರ್ವರು ಕೊಲ್ಲಲ್ಪಟ್ಟಿದ್ದಾರೆ ಎಂದು ಫೆಲಸ್ತೀನಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಬೇರೆ ನಾಲ್ವರು ಯುವಕರಿಗೂ ಗುಂಡೇಟು ತಗುಲಿದೆ. ಫೆಲಸ್ತೀನಿನ ಹುಡುಗನೊಬ್ಬನನ್ನು ಬಂಧಿಸಲಿಕ್ಕಾಗಿ ಹಲವು ಇಸ್ರೇಲ್ ಸೈನಿಕರು ಶಿಬಿರದೊಳಗೆ ನುಗ್ಗಿದ್ದರು ಎಂದು ಅಲ್‍ಜಝೀರಾ ವರದಿ ಮಾಡಿದೆ.