ಸನ್ಮಾರ್ಗ ವಾರ್ತೆ
ಪಾಣೆಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೆಷನ್ (SIO) ಪಾಣೆಮಂಗಳೂರು ಶಾಖೆಯ ವಾರದ ಸಭೆಯಲ್ಲಿ ಭಾನುವಾರ ‘ಮಯ್ಯತ್ ಪರಿಪಾಲನೆ’ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಭಾಗವಹಿಸಿದ ಇಸ್ಮಾಯಿಲ್ ಅರಬ್ಬಿ (SKSSF ಕೆಳಗಿನಪೇಟೆ, ಬಂಟ್ವಾಳದ ಮಾಜಿ ಅಧ್ಯಕ್ಷರು) ಅವರು ತಮ್ಮ ಅನುಭವ ಹಂಚಿಕೊಂಡು ಪ್ರಾಯೋಗಿಕ ಮಾದರಿಯನ್ನು ಪ್ರದರ್ಶಿಸುವ ಮೂಲಕ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.

ಈ ತರಬೇತಿಯಿಂದ ಮಯ್ಯತ್ ಪರಿಪಾಲನೆ ಕುರಿತ ನೈಪುಣ್ಯ ಮತ್ತು ಹೊಸ ಅರಿವು ದೊರಕಿದೆ ಎಂದು ಆಯೋಜಕರು ತಿಳಿಸಿದ್ದಾರೆ.












