ಉತ್ತರಪ್ರದೇಶ ಚುನಾವಣೆ ಮುಂದೂಡುವುದಿಲ್ಲ: ಚುನಾವಣಾ ಆಯೋಗ

0
247

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಪ್ರದೇಶದ ಚುನಾವಣೆಯನ್ನು ಮುಂದೂಡುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆ ಮುಂದೂಡುವ ಅಗತ್ಯವಿಲ್ಲ ಎಂದು ರಾಜಕೀಯ ಪಾರ್ಟಿಗಳು ತಿಳಿಸಿವೆ ಎಂಬುದಾಗಿ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದರು. ಸಂಪೂರ್ಣ ಕೊರೋನ ಪ್ರೊಟೊಕಾಲ್ ಪಾಲಿಸಿ ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಜನವರಿ ಐದರಂದು ಸಂಪೂರ್ಣ ಮತದಾನ ಪಟ್ಟಿ ಪ್ರಕಟವಾಗಲಿದೆ. ಎಲ್ಲ ಬೂತ್‍ಗಳಲ್ಲಿಯೂ ವಿವಿ ಪ್ಯಾಟ್‌ ಮೆಷಿನಗಳು ಇರಲಿವೆ. ಒಂದು ಲಕ್ಷ ಬೂತುಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಇರುತ್ತದೆ. ಬೂತ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು. 11,000 ಬೂತಗಳು ಹೊಸದಾಗಿ ರಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮತದಾನ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗುವುದು. ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮತದಾನ ಇರಲಿದೆ. ಹೆಚ್ಚು ಮತದಾನಾವಾಗುವಂತೆ ಗಮನಹರಿಸಲಾಗವುದು. ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುವ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸಲಾಗುವುದು, ಚುನಾವಣೆ ಇರುವ ರಾಜ್ಯಗಳಲ್ಲಿ ವ್ಯಾಕ್ಸಿನೇಶನ್ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.