ಗೌರಿ ಹತ್ಯೆ ಆರೋಪಿಗೆ ಪಕ್ಷದ ಹುದ್ದೆ; ನಿರ್ಧಾರ ಹಿಂತೆಗೆದ ಶಿವಸೇನಾ ಶಿಂಧೆ ಬಣ

0
160

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುಂಚೆ ಶುಕ್ರವಾರ ಗೌರಿ ಹತ್ಯೆ ಆರೋಪಿ ಶ್ರೀಕಾಂತ್ ಪಾಂಗಾರ್ಕ‌ರ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಪಕ್ಷದ ಯಾವುದೇ ಹುದ್ದೆಗೆ ನೇಮಕ ಮಾಡುವುದನ್ನು ಮುಖಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯು ತಡೆಹಿಡಿದಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಪಂಗರ್ಕರ್ ಅವರ ನೇಮಕವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದ್ ರದ್ದುಗೊಳಿಸಿದ್ದು, ಪಂಗರ್ಕರ್ ಅವರ ಎಲ್ಲಾ ಜಿಲ್ಲಾ ಮಟ್ಟದ ನೇಮಕಾತಿಗಳನ್ನು “ಅನೂರ್ಜಿತ” ಎಂದು ಘೋಷಿಸುವ ಆದೇಶವನ್ನು ಹೊರಡಿಸಿದ್ದಾರೆ.

ಖ್ಯಾತ ಪತ್ರಕರ್ತೆ ಮತ್ತು ಬಲಪಂಥೀಯ ಉಗ್ರವಾದದ ಕಟು ವಿಮರ್ಶಕಿ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಶ್ರೀಕಾಂತ್ ಪಂಗಾರ್ಕರ್ ಅವರನ್ನು ಪ್ರಮುಖ ಶಂಕಿತನ ನಿಕಟ ಸಹವರ್ತಿ ಎಂದು ಗುರುತಿಸಿದೆ.