ತ್ರಿಪುರ: 6111 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ 5916 ಸ್ಥಾನಗಳನ್ನು ಗೆದ್ದ ಬಿಜೆಪಿಯಿಂದ ಇದೀಗ ಕೇರಳ ಭೇಟೆಯ ಮಾತು; ಎಡಪಕ್ಷಗಳಲ್ಲಿ ಮೌನ

0
700

ಹೊಸದಿಲ್ಲಿ, ಆ. 3: ಇಪ್ಪತ್ತೈದು ವರ್ಷಗಳ ತನಕ ಎಡಪಕ್ಷಗಳ ಆಳ್ವಿಕೆಯಿದ್ದ ತ್ರಿಪುರದಲ್ಲಿ ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿ ಆಡಳಿತ ವಶಪಡಿಸಿಕೊಂಡ ಬೆನ್ನಿಗೆ ಇದೀಗ ಸ್ಥಳೀಯಾಡಳಿತ ಚುನಾವಣೆಯಲ್ಲಿಯೂ ಭಾರಿ ವಿಜಯ ಗಳಿಸಿದ ಸಂತೋಷದಲ್ಲಿರುವ ಬಿಜೆಪಿಯು ಇದನ್ನು ಕೇರಳದಲ್ಲೂ ಮಾಡಿ ತೋರಿಸುವುದಾಗಿ ಹೇಳಿದೆ. ಬಿಜೆಪಿ ತ್ರಿಪುರ ಮಾದರಿಯಲ್ಲಿ ಪಶ್ಚಿಮಬಂಗಾಳ ಮತ್ತು ಕೇರಳದಲ್ಲಿಯೂ ಅಧಿಕಾರವನ್ನು ವಶಪಡಿಸಿಕೊಳ್ಳಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ತ್ರಿಪುರದಲ್ಲಿ ಸ್ಥಳೀಯಾಡಳಿತ ಚುನಾವಣೆಯಲ್ಲಿ 6111 ಗ್ರಾಮಪಂಚಾಯತ್ ಸೀಟುಗಳಲ್ಲಿ 5916 ಮತ್ತು 419 ಪಂಚಾಯತ್ ಸಮಿತಿಗಳಲ್ಲಿ 411ರಲ್ಲಿ ಬಿಜೆಪಿ ವಿಜಯಿಯಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರದಲ್ಲಿ ಸಿಪಿಎಂನ್ನು ಹೊರಗಟ್ಟಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಒಂದು ಕಾಲದಲ್ಲಿ ಸಿಪಿಎಂ ಕೋಟೆಯಾಗಿದ್ದ ಪಶ್ಚಿಮಬಂಗಾಳದಲ್ಲಿ ಕಳೆದ ಪಾರ್ಲಿಮೆಂಟು ಚುನಾವಣೆಯಲ್ಲಿ ಬಿಜೆಪಿ 42ರಲ್ಲಿ ಹದಿನೆಂಟು ಸೀಟುಗಳನ್ನು ಗಳಿಸಿಕೊಂಡಿದೆ. ತ್ರಿಪುರದ ವಿಜಯ ಕೇರಳದಲ್ಲಿಯೂ ಸಾಧ್ಯವೆಂದು ಬಿಜೆಪಿಯಲ್ಲಿ ಆತ್ಮವಿಶ್ವಾಸ ಇದೆ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದರು.