ಸನ್ಮಾರ್ಗ ವಾರ್ತೆ
ಪೆರುಂಬಾವೂರ್,ಡಿ.31: ಒಂದೇ ಕುಟುಂಬದ ನಾಲ್ಕು ಮಂದಿ ಚೀಟಿ ವ್ಯವಹಾರದ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಪೆರುಂಬಾವೂರ್ ಚೆಲಾಮಟ್ಟ ಎಂಬಲ್ಲಿ ಘಟನೆ ನಡೆದಿದ್ದು ಪಾರಪ್ಪರತ್ತುಕುಡಿ ಹೌಸ್ ಬಿಜು, ಪತ್ನಿ ಅಂಬಿಳಿ, ಮಕ್ಕಳಾದ ಆದಿತ್ಯ, ಅರ್ಜುನ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಮಕ್ಕಳು ಇಬ್ಬರು ಪಡಸಾಲೆಯಲ್ಲಿ ಮತ್ತು ಬಿಜು ಹಾಗೂ ಪತ್ನಿ ಮಲಗುವ ಕೋಣೆಯಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೀಟಿ ವ್ಯವಹಾರದ ನಷ್ಟವು ಇವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತ್ತು ಎಂದು ಹೇಳಲಾಗಿದ್ದು ನಿಜವಾದ ಕಾರಣ ಇನ್ನಷ್ಟೆ ಬಯಲುಗೊಳ್ಳಬೇಕಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದು, ಹತ್ತಿರದ ವರಾಂಡದಲ್ಲಿ ಇವರು ಹಾಲಿನ ಪಾತ್ರೆ ಇರಿಸಿದ್ದರು. ಇದರ ಅಡಿಯಲ್ಲಿ ಆತ್ಮಹತ್ಯೆಯ ಕುರಿತ ಚೀಟಿ ದೊರಕಿದೆ. ಇದರ ಅಡಿಯಲ್ಲಿ ಚಿನ್ನಾಭರಣಗಳೂ ಇದ್ದವು. ಇವುಗಳನ್ನು ಮಾರಿ ತಮ್ಮ ಅಂತ್ಯ ವಿಧಿವಿಧಾನಗಳನ್ನು ಮಾಡಬೇಕೆಂದು ಮತ್ತು ಇಂದು ತಮ್ಮ ಜೀವನದ ಕೊನೆಯ ದಿನವೆಂದು ಪತ್ರ ಬರೆದಿಡಲಾಗಿತ್ತು.












