ನಿಲ್ಲದ ಪೆಟ್ರೋಲ್ ಡೀಸೆಲ್ ದರ ಏರಿಕೆ; ಹತ್ತನೆ ದಿನವೂ ದರ ಹೆಚ್ಚಳ

0
603

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.16: ದೇಶದಲ್ಲಿ ಪೆಟ್ರೊಲ್ ದರ ಹೆಚ್ಚಳವಾಗುತ್ತಲೇ ಇದೆ. ನಿರಂತರ ಹತ್ತನೆ ದಿವಸ ಬೆಲೆ ಹೆಚ್ಚಳವಾಗಿದೆ. ಮಂಗಳವಾರ ಪೆಟ್ರೋಲ್‍ಗೆ 47 ಪೈಸೆ ಡೀಸೆಲ್‍ಗೆ 54 ಪೈಸೆ ಹೆಚ್ಚಿಸಲಾಗಿದೆ. ಸೋಮವಾರ ತೈಲ ಕಂಪೆನಿಗಳು ಪೆಟ್ರೋಲ್ ಲೀಟರ್‌ಗೆ 48 ಪೈಸೆ, ಡೀಸೆಲ್‍ಗೆ 23 ಪೈಸ್ ಹೆಚ್ಚಿಸಿದ್ದವು. ಇದರೊಂದಿಗೆ ಹತ್ತು ದಿವಸದಲ್ಲಿ ಪೆಟ್ರೋಲ್‍ಗೆ ಲೀಟರ್‌ಗೆ 5.48 ರೂಪಾಯಿ ಡೀಸೆಲ್‍ಗೆ 5.15 ರೂಪಾಯಿ ಹೆಚ್ಚಳವಾಗಿದೆ.

82 ದಿವಸದ ಮಧ್ಯಂತರದಲ್ಲಿ ಜೂನ್ ಏಳರಿಂದ ಬೆಲೆ ಹೆಚ್ಚಳ ಆರಂಭವಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಅಯಿಲ್ ಬೆಲೆಯ ಹೆಚ್ಚಳ ಇಂಧನ ದರ ಹೆಚ್ಚಳಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಬೆಲೆ ಭಾರೀ ಕಡಿಮೆಯಿದ್ದಾಗ ಇದರ ಲಾಭವನ್ನು ಬಳಕೆದಾರರಿಗೆ ಕಂಪೆನಿಗಳು ನೀಡಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.