ಕೊರೋನ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಮಾಡಬಾರದು: ವಿಶ್ವ ಆರೋಗ್ಯ ಸಂಘಟನೆಯಿಂದ ಹೊಸ ನಿರ್ದೇಶನ

0
244

ಸನ್ಮಾರ್ಗ ವಾರ್ತೆ

ಪ್ಯಾರಿಸ್: ಗುಣಮುಖರಾದ ಕೊರೋನ ರೋಗಿಗಳ ರಕ್ತದಿಂದ ತೆಗೆದ ಪ್ಲಾಸ್ಮಾವನ್ನು ಕೊರೋನ ರೋಗಿಗಳಿಗೆ ಚಿಕಿತ್ಸೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. ದೊಡ್ಡ ಮತ್ತು ಸಣ್ಣ ಮಟ್ಟದ ಅಸೌಖ್ಯ ಇರುವವರಿಗೆ ಕೊಡಬಾರದು ಎಂದು ನಿರ್ದಶಿಸಿದೆ. ಈಗಿನ ಪ್ರಯೋಗದಲ್ಲಿ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿಲ್ಲ. ಮೆಕಾನಿಕಲ್ ವೆಂಟಿಲೇಶನ್ ಆವಶ್ಯಕತೆ ಕಡಿಮೆ ಮಾಡಲು ಕೂಡ ಆಗಿಲ್ಲ. ಮಾತ್ರವಲ್ಲ ಈ ಚಿಕಿತ್ಸೆ ದುಬಾರಿ ಮತ್ತು ಹೆಚ್ಚು ಸಮಯವನ್ನು ಬೇಡುತ್ತಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್‍ನಲ್ಲಿ ಪ್ರಕಟವಾದ ಲೇಖನದಲ್ಲಿ ವಿಶ್ವ ಆರೋಗ್ಯ ಸಂಘಟನೆ ತಿಳಿಸಿತು.

ಗುಣಮುಖರಾದ ಕೊರೊನ ರೋಗಿಗಳ ರಕ್ತದ ದ್ರಾವಕ ಭಾಗ ಕನ್‍ವೆಲ್ಸಂಟ್ ಪ್ಲಾಸ್ಮಾವಾಗಿದೆ. ಅದರಲ್ಲಿ ಕೋರೊನ ವೈರಸ್ ಬಾಧೆಯ ನಂತರ ದೇಹ ಉತ್ಪಾದಿಸಿದ ಆಂಟಿ ಬಾಡಿಕ್‍ಗಳು ಇರುತ್ತದೆ. ಕೊರೋನ ಮಹಾಮಾರಿಯ ಆರಂಭದಲ್ಲಿ ಈ ಚಿಕಿತ್ಸೆ ವ್ಯಾಪಕವಾಗಿ ಮಾಡಿಸಿಕೊಳ್ಳಲಾಗುತ್ತಿತ್ತು. ಆದರೆ ಕ್ಲಿನಿಕಲ್ ಪರೀಕ್ಷೆಯಲ್ಲಿ ಇದರಿಂದ ಪರಿಮಿತ ಫಲಿತಾಂಶ ಮಾತ್ರ ಸಿಕ್ಕಿತ್ತು. ಇದಾದ ನಂತರ ಭಾರತದಲ್ಲಿ ಕೊರೋನ ಚಿಕಿತ್ಸೆಯಿಂದ ಪ್ಲಾಸ್ಮಾ ತೆರಪಿಯನ್ನು ಕೈಬಿಡಲಾಗಿತ್ತು.