‘ಅಸ್ಸಲಾಮು ಅಲೈಕುಂ’ ಎಂದು ಒಂದು ನಿರ್ದಿಷ್ಟ ಸಮುದಾಯವನ್ನು ಅಭಿಸಂಬೋಧಿಸಿದ್ದಾರೆ- ಶರ್ಜಿಲ್ ಇಮಾಮ್ ವಿರುದ್ಧ ಪೊಲೀಸರ ವಾದ

0
789

ಸನ್ಮಾರ್ಗ ವಾರ್ತೆ

ನವದೆಹಲಿ: ಸಿಎಎ-ಎನ್ಆರ್‌ಸಿ ವಿರೋಧಿ ಹೋರಾಟದ ಸಮಯದಲ್ಲಿ ಸಭಿಕರನ್ನು ಉದ್ದೇಶಿಸಿ ಅಸ್ಸಲಾಮು ಅಲೈಕುಂ ಎಂದು ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಹೇಳಿರುವುದನ್ನು ದೆಹಲಿ ಪೊಲೀಸರು ಅಪರಾಧವೆಂದು ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾರೆ. ಒಂದು ನಿರ್ದಿಷ್ಟ ಸಮುದಾಯವನ್ನು ಶರ್ಜಿಲ್ ಇಮಾಮ್ ಅಭಿಸಂಬೋಧನೆ ನಡೆಸಿದ್ದರು ಎಂದು ತಿಳಿಯುವುದಕ್ಕೆ ಇದು ಧಾರಾಳ ಸಾಕು ಎಂದು ಪೊಲೀಸರು ಆರೋಪಿಸಿದ್ದಾರೆ

ಶರ್ಜೀಲ್ ಇಮಾಮ್ ಜಾಮೀನು ಕೋರಿಕೆಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ವಿಶೇಷ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಮಾಡಿದ ವಾದವನ್ನು ನ್ಯಾಯಾಲಯ ಆಲಿಸಿತು.

ಜನಾಕ್ರೋಶವನ್ನು ಉದ್ದೀಪಿಸಲು ಶರ್ಜಿಲ್ ಇಮಾಮ್ ಶ್ರಮಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಶರ್ಜೀಲ್ ಇಮಾಮ್ ಕಿಸೆಗಳ್ಳನಲ್ಲ ಮತ್ತು ಮಾದಕದ್ರವ್ಯ ಮಾರಾಟಗಾರರನೂ ಅಲ್ಲ. ಆತ ಐದು ಭಾಷೆಗಳಲ್ಲಿ ಭಾಷಣ ಮಾಡುವ ಚಾತುರ್ಯ ಇರುವ ವ್ಯಕ್ತಿ ಮತ್ತು ಆತನ ಭಾಷಣಕ್ಕೆ ಜನರಲ್ಲಿ ಆಕ್ರೋಶ ಹುಟ್ಟಿಸುವ ಸಾಮರ್ಥ್ಯ ಇದೆ ಎಂದು ಪೊಲೀಸರು ವಾದಿಸಿದ್ದಾರೆ‌.