2006ರ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡರೂ ನಿಲ್ಲದ ಪೋಲಿಸ್ ಕಿರುಕುಳ

0
132

ಸನ್ಮಾರ್ಗ ವಾರ್ತೆ

ಮುಂಬಯಿ: 2006 ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾದ ಬಳಿಕವೂ ಅಬ್ದುಲ್ ವಾಹಿದ್ ಶೇಖ್ ರನ್ನು ಮುಂಬೈ ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಪೊಲೀಸರ ನಿಯಮಿತ ಭೇಟಿಗಳಿಂದ ತಮಗೂ ತಮ್ಮ ಕುಟುಂಬಕ್ಕೂ ಅಪಾರ ತೊಂದರೆ ಉಂಟಾಗಿದೆ ಎಂದು ಶೇಖ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಘಟನೆಯನ್ನು ಉಲ್ಲೇಖಿಸುತ್ತಾ ಶೇಖ್ ಅವರು, ತಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮುಂಬೈ ಪೊಲೀಸ್‌ನ ಇಬ್ಬರು ಅಧಿಕಾರಿಗಳು ಮನೆಗೆ ಭೇಟಿ ನೀಡಿ, ತನ್ನ ಪತ್ನಿಯನ್ನು ವಿವಿಧ ವಿಷಯಗಳ ಬಗ್ಗೆ ಕೇಳಿ ತೊಂದರೆಗೊಳಿಸಿದ್ದು, ಇದು ಅವರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

“ಅವರು ನನ್ನ ಪತ್ನಿಯೊಂದಿಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುವುದಷ್ಟೇ ಅಲ್ಲ, ನನ್ನನ್ನೂ ಕರೆದು ಆದೇ ಪ್ರಶ್ನೆಗಳನ್ನು ಪುನಾರಾವೃತ್ತಿ ಮಾಡಿದರು.

ಈ “ನಿರಂತರ ಕಿರುಕುಳ”ವನ್ನು ಮುಂದಿಟ್ಟು ಶೇಖ್ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಈ ಅನಗತ್ಯ ಭೇಟಿಗಳು ಮತ್ತು ಪ್ರಶ್ನೆಗಳು ನಿಲ್ಲಬೇಕೆಂದು ಕೇಳಿಕೊಂಡಿದ್ದಾರೆ. ಪೋಲಿಸ್ ಅಧಿಕಾರಿಗಳು ತಮ್ಮನ್ನು ಕ್ರೈಮ್ ಬ್ರಾಂಚ್‌ನ ಸದಸ್ಯರು ಎಂದು ಪರಿಚಯಿಸಿದ್ದಾರೆ.