ಸುನಾಲಿ ಬಿಬಿ ಮತ್ತು ಕುಟುಂಬವನ್ನು ಬಾಂಗ್ಲಾದೊಳಕ್ಕೆ ತಳ್ಳಿದ ಪೊಲೀಸರು: ಕೊಲ್ಕತ್ತಾ ಹೈಕೋರ್ಟ್ ನಲ್ಲಿ ವಿಚಾರಣೆ

0
411

ಸನ್ಮಾರ್ಗ ವಾರ್ತೆ

ನುಸುಳು ಕೋರರು ಭಾರತೀಯರ ಉದ್ಯೋಗ ಮತ್ತು ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದ ಮರುದಿನ ಎಂಟು ತಿಂಗಳ ಗರ್ಭಿಣಿ ಆಗಿರುವ 29 ವರ್ಷದ ಸುನಾಲಿಬೀವಿ ಮತ್ತು ಅವರ ಕುಟುಂಬ ಬಾಂಗ್ಲಾದೇಶದಲ್ಲಿ ಬಂಧನಕ್ಕೆ ಸಿಲುಕಿಕೊಂಡ ಸ್ಥಿತಿಯಲ್ಲಿದೆ. ಆಕೆಯಲ್ಲದೆ ಆಕೆಯ ಪತಿ ಮತ್ತು 8 ವರ್ಷದ ಮಗ ಕೂಡ ಬಾಂಗ್ಲಾದೇಶದಲ್ಲಿದ್ದಾರೆ. ಆಕೆಯ ಮೇಲೆ ವಿದೇಶಿ ಕಾಯ್ದೆ ಮತ್ತು ಪಾಸ್ಪೋರ್ಟ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನೆರೆ ರಾಷ್ಟ್ರದಿಂದ ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸಿದ್ದಾರೆ ಎಂಬ ಪ್ರಕರಣ ದಾಖಲಾಗಿದೆ. ಆದರೆ ವಾಸ್ತವ ಬೇರೆನೇ ಇದೆ.

ಹೀಗೆಯೇ 32 ವರ್ಷದ ಸ್ವೀಟಿ ಬಿಬಿ ಮತ್ತು ಅವರ 16 ಮತ್ತು ಆರು ವರ್ಷದ ಮಕ್ಕಳು ಕೂಡ ಹೀಗೆಯೇ ಬಾಂಗ್ಲಾದೇಶದಲ್ಲಿ ಕಾನೂನುಬಾಹಿರ ಪ್ರವೇಶ ಎಂಬ ಪ್ರಕರಣದಡಿ ಬಂದಿತರಾಗಿದ್ದಾರೆ. ಈ ಎರಡು ಕುಟುಂಬವನ್ನು ಭಾರತದ ಪೊಲೀಸರು ಬಾಂಗ್ಲಾದ ಗಡಿಯೊಳಗೆ ತಳ್ಳಿದ್ದಾರೆ. ಅದಕ್ಕಿಂತ ಮೊದಲು ಇವರನ್ನು ಬಂಧಿಸಿದ್ದರು. ಕಾನೂನುಬಾಹಿರ ವಲಸಿಗರು ಎಂಬ ಹೆಸರಲ್ಲಿ ಇವರನ್ನು ಬಾಂಗ್ಲಾದೇಶದ ಒಳಗೆ ತಳ್ಳಿದ್ದಾರೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳದ ಸುನಾಲಿ ಬಿಬಿ ಅವರ ಕುಟುಂಬ ದೆಹಲಿಯಲ್ಲಿ ಮನೆ ಕೆಲಸ ಇಟ್ಟಿಗೆ ಕೆಲಸ ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಇವರನ್ನು ಕಾನೂನು ಬಾಹಿರ ನುಸುಳುಕೋರರು ಎಂದು ಹೇಳಿ ಬಂಧನದಲ್ಲಿಟ್ಟು ಇದೀಗ ಬಾಂಗ್ಲಾದೇಶದೊಳಕ್ಕೆ ತಳ್ಳಲಾಗಿದೆ ಎಂದು ವರದಿಯಾಗಿದೆ.

ಇವರ ಬಗ್ಗೆ ಕೊಲ್ಕತ್ತಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹಾಕಲಾಗಿದ್ದು ವಿಚಾರಣೆ ನಡೆಯುತ್ತಿದೆ.