ದಿಲ್ಲಿಯ ಹವಾಮಾನ ಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ: ಸುಪ್ರೀಂ ಕೋರ್ಟಿನಲ್ಲಿ ಯೋಗಿ ಸರಕಾರ…!

0
307

ಸನ್ಮಾರ್ಗ ವಾರ್ತೆ

ದಿಲ್ಲಿ: ದಿಲ್ಲಿಯ ಹವಾಮಾನ ಮಾಲಿನ್ಯಕ್ಕೆ ಪಾಕಿಸ್ತಾನ ಕಾರಣವೆಂದು ಉತ್ತರ ಪ್ರದೇಶ ಸರಕಾರ ಸುಪ್ರೀಂಕೋರ್ಟಿನಲ್ಲಿ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಲ್ಲಿ ಸುದ್ದಿ ಮಾಡಿದೆ. ದೇಶದ ರಾಜಧಾನಿಯ ಹವಾಮಾನ ಮಾಲಿನ್ಯದಲ್ಲಿ ಉತ್ತರ ಪ್ರದೇಶ ಸರಕಾರದ ಉದ್ಯಮಗಳದ್ದೇನೂ ಪಾತ್ರ ಇಲ್ಲ ಎಂದು ಉತ್ತರ ಪ್ರದೇಶ ಸರಕಾರ ಹೇಳಿತು.

ದಿಲ್ಲಿಯ ವಾಯುಮಾಲಿನ್ಯದ ಕುರಿತ ಅರ್ಜಿಯ ವಿಚಾರಣೆಯಲ್ಲಿ ಚಿಫ್ ಜಸ್ಟಿಸ್ ಎನ್‍ವಿ ರಮಣ ಅಧ್ಯಕ್ಷತೆಯ ಪೀಠದ ಮುಂದೆ ಉತ್ತರ ಪ್ರದೇಶ ಸರಕಾರ ಪರ ವಕೀಲ ರಂಜಿತ್ ಕುಮಾರ್ ಹಾಜರಾದರು.

ದೆಹಲಿಯ ಹವಾಮಾನ ಮಲಿನವಾಗಲು ಪಾಕಿಸ್ತಾನ ಕಾರಣವಾಗಿದ್ದು ಅಲ್ಲಿಂದ ಬರುವ ಮಲಿನ ವಾಯು ಇಲ್ಲಿನ ವಾತಾವರಣ ಕೆಡಿಸಿ ಹಾಕುತ್ತಿದೆ ಎಂದು ಅವರು ವಾದಿಸಿದರು. ಉತ್ತರ ಪ್ರದೇಶದ ಉದ್ಯಮಗಳನ್ನು ಎಂಟು ಗಂಟೆಗೆ ನಿಯಂತ್ರಿಸಿದರೆ ಕಬ್ಬು, ಹಾಲು ಉತ್ಪನ್ನಗಳಿಗೆ ತೊಂದರೆ ಎದುರಾಗಬಹುದು ಎಂದು ರಂಜಿತ್ ಕುಮಾರ್ ಹೇಳಿದರು. ಅಂದರೆ ಪಾಕಿಸ್ತಾನದ ಉದ್ದಿಮೆಗಳನ್ನು ನಿಷೇಧಿಸಬೇಕೆಂದು ನೀವು ಬಯಸುತ್ತೀರಾ ಎಂದು ಯೋಗಿ ಸರಕಾರವನ್ನು ಸುಪ್ರೀಂ ಕೋರ್ಟ್ ಖಾರವಾಗಿಯೇ ಪ್ರಶ್ನಿಸಿದೆ.