ಎನ್‍ ಪಿ ಆರ್ ನವೀಕರಣಕ್ಕೆ ಸಚಿವ ಸಂಪುಟದಿಂದ ಹಸಿರು ನಿಶಾನೆ; 8,500 ಕೋಟಿ .ರೂ. ವೆಚ್ಚ

0
883

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 24: ರಾಷ್ಟ್ರೀಯ ಜನಸಂಖ್ಯಾ ನೋಂದಣಿ- ಎನ್ ಪಿ ಆರ್- ನವೀಕರಣಕ್ಕೆ 8,500 ಕೋಟಿ ರೂಪಾಯಿ ತೆಗೆದಿರಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಸಮಗ್ರ ವಿವರಗಳನ್ನು ಸಂಗ್ರಹಿಸುವುದು ಎನ್‍ಪಿಆರ್ ಉದ್ದೇಶ ಎಂದು ಸೆಶನ್ಸ್ ಕಮಿಶನ್ ತಿಳಿಸಿದೆ. ಡಾಟಾ ಆಧಾರದಲ್ಲಿ ಜನಸಂಖ್ಯೆ ಮತ್ತು ಬಯೊಮೆಟ್ರಿಕ್ ವಿವರಗಳು ಇರಲಿದೆ. ಒಂದು ಪ್ರದೇಶದಲ್ಲಿ ಕಡಿಮೆಯೆಂದರೆ ಆರು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಇದ್ದ ವ್ಯಕ್ತಿಯನ್ನು ಸಾಮಾನ್ಯ ನಿವಾಸಿ ಅಥವಾ ಮುಂದಿನ ಆರು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಒಂದು ಪ್ರದೇಶದಲ್ಲಿ ವಾಸಿಸಲು ಬಯುಸುವ ವ್ಯಕ್ತಿಗೂ ಅರ್ಜಿ ಹಾಕಬಹುದು. ಭಾರತದ ಪ್ರತಿಯೊಬ್ಬ ಕಡ್ಡಾಯವಾಗಿ ಎನ್‍ ಪಿ ಆರ್ ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಜನಗಣತಿಗೆ ಜೋಡಿಸಿರುವ ಎನ್‍ ಪಿ ಆರ್, ಎನ್ ಆರ್ ಸಿ ಜಾರಿಗೆ ತರುವ ಮೊದಲ ಹಂತವೆಂದು ಅರೋಪ ಕೇಳಿ ಬಂದಿದೆ. ಪಶ್ಚಿಮ ಬಂಗಾಳ, ಕೇರಳ ಮೊದಲಾದ ರಾಜ್ಯಗಳು ಎನ್‍ ಪಿ ಆರ್ ಚಟುವಟಿಕೆಗಳನ್ನು ನಿಲ್ಲಿಸಿವೆ.

2020 ಎಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಅಸ್ಸಾಂ ಹೊರತು ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‍ ಪಿ ಆರ್ ತರಬೇತಿ ನಡೆಯಲಿದೆ. ಎನ್‍ ಪಿ ಆರ್ ಡಾಟ 20110ರಲ್ಲಿ ಯುಪಿಎ ಸರಕಾರ ಕಾಲದಲ್ಲಿ ಮೊತ್ತಮೊದಲು ಸಂಗ್ರಹಿಸಲಾಗಿತ್ತು. ಮನೆ ಮನೆ ಸಮೀಕ್ಷೆ ಉಪಯೋಗಿಸಿ ಎನ್‍ ಪಿ ಆರ್ ಡಾಟ 2015ರಲ್ಲಿ ಅಪ್‍ಡೇಟ್ ಮಾಡಲಾಗಿತ್ತು. ಹೊಸ ವಿವರಗಳ ಡಿಜಿಟೈಝೇಶನ್ ಈಗ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎನ್‍ ಪಿ ಆರ್ ನವೀಕರಣದೊಂದಿಗೆ ದೇಶದ ಮನೆಗಳ ಲೆಕ್ಕ 2020ರಲ್ಲಿ ನಡೆಯಲಿದೆ.