ಇರಾನ್‍ನಲ್ಲಿ ಅಧ್ಯಕ್ಷೀಯ ಚುನಾವಣೆ

0
161

ಸನ್ಮಾರ್ಗ ವಾರ್ತೆ

ಟೆಹ್ರಾನ್ ; ಕಳೆದ ತಿಂಗಳು ವಿಮಾನ ಅಪಘಾತದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನರಾದ ನಂತರ ಅವರಿಂದ ತೆರವಾದ ಸ್ಥಾನಕ್ಕೆ ಮಾಜಿ ಪರಮಾಣು ಸಂಧಾನಕಾರ ಸಯೀದ್ ಜಲಿಲಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಲಿಬಾಫ್ ಮತ್ತು ಸುಧಾರಣಾವಾದಿ ಎಂದು ಕರೆಯಲ್ಪಡುವ ಅಭ್ಯರ್ಥಿ ಮಸೂದ್ ಪೆಜೆಶ್ಕಿಯಾನ್ ಅಧ್ಯಕ್ಷ ಅಭ್ಯಥಿಗಳಾಗಿದ್ದಾರೆ.

ಇವರಲ್ಲಿ ಪೆಜೆಶ್ಕಿಯಾನ್‍ರು ನಿಧನರಾದ ಅಧ್ಯಕ್ಷ ಇಬ್ರಾಹೀಂ ರೈಸಿಯವರ ಅನುಯಾಯಿ ಎನ್ನಲಾಗುತ್ತಿದೆ. ರೈಸಿಯವರ ಆಳ್ವಿಕೆಯಲ್ಲಿ ವಿಶ್ವ ಶಕ್ತಿಗಳಿಗೆ ಸರಿಸಾಟಿ ಎದೆಯೆತ್ತಿ ನಿಂತಿತ್ತು.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಮಾಸ್ ಯುದ್ಧದಿಂದಾಗಿ ರಾಜಕೀಯ ಅರಾಜಕತೆ ಇದೆ. ಇರಾನ್ ಫೆಲಸ್ತೀನ್ ಪರ ನಿಲುವ ಸ್ವೀಕರಿಸಿದ್ದು ಅಧ್ಯಕ್ಷ ರೈಸಿಯವರ ವಿಮಾನ ದುರ್ಘಟನೆ ಕೂಡ ವ್ಯಾಪಕ ಸಂದೇಹ ವ್ಯಕ್ತವಾಗಿತ್ತು.

ಮತದಾರರು ಪ್ರಬಲ ಅಭ್ಯರ್ಥಿಗಳು ಮತ್ತು ಇರಾನ್‍ನ ಸುಧಾರಣಾವಾದಿ ಚಳುವಳಿಯೊಂದಿಗೆ ಸಂಬಂಧ ಹೊಂದಿರುವ ಅಷ್ಟೇನು ಜನಪ್ರಿಯವಲ್ಲದ ರಾಜಕಾರಣಿಗಳಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ.

ಬೆಳಗ್ಗೆ 8 ಗಂಟೆಗೆ (ಸ್ಥಳೀಯ ಕಾಲಮಾನ) ಮತದಾನ ಆರಂಭವಾಯಿತು ಎಂದು ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ವಹಿಸಿರುವ ಆಂತರಿಕ ಸಚಿವ ಅಹ್ಮದ್ ವಹೇದಿ ತಿಳಿಸಿದ್ದಾರೆ.

ಇರಾನ್‍ನ 85 ವರ್ಷದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಚುನಾವಣೆಯಲ್ಲಿ ತಮ್ಮ ಮೊದಲ ಮತವನ್ನು ಚಲಾಯಿಸಿದರು ಮತ್ತು ಸಾರ್ವಜನಿಕರಿಗೆ ಮತ ಚಲಾಯಿಸುವಂತೆ ಒತ್ತಾಯಿಸಿದರು. ವಿಶ್ಲೇಷಕರು ಅಧ್ಯಕ್ಷೀಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ ಎನ್ನುತ್ತಿದ್ದಾರೆ.