ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.3: ಯಾವುದೇ ಸೂಚನೆ ನೀಡದೇ ಪ್ರಧಾನಿ ನರೇಂದ್ರ ಮೋದಿ ಲೇಹ್ಗೆ ಭೇಟಿ ನೀಡಿದ್ದಾರೆ. ಗಲ್ವಾನ್ ಘಾಟಿ ಸಂಘರ್ಷ ಭರಿತವಾದ ಬಳಿಕ ಅವರು ನೀಡುತ್ತಿರುವ ಅನಿರೀಕ್ಷಿತವೂ ಆದ ಮೊದಲ ಭೇಟಿಯಿದು. ಅವರ ಜೊತೆ ಬಿಪಿನ್ ರಾವತ್ ಇದ್ದು, ಅವರು ಕೇಂದ್ರ ಸರಕಾರ ಹೊಸದಾಗಿ ಸೃಷ್ಟಿಸಿದ ಹುದ್ದೆಯಾದ ಜಂಟಿ ಸೇನಾ ಮುಖ್ಯಸ್ಥರಾಗಿದ್ದಾರೆ.
ಪ್ರದೇಶದಲ್ಲಿ ಇರುವ ಸ್ಥಿತಿಗತಿಗಳನ್ನು ಪರಿಶೀಲಿಸುವುದು ಪ್ರಧಾನಿಯ ಉದ್ದೇಶವಾಗಿದೆ. ಆದ್ದರಿಂದ ಅವರು ಸ್ವಯಂ ಲೇಹ್ಗೆ ಭೇಟಿ ನೀಡಿದ್ದಾರೆ. ಪೂರ್ವ ಲಡಾಕ್ನ14 ಕೊಪ್ರ್ಸ್ ಸೈನ್ಯದೊಂದಿಗೆ ಅವರು ಚರ್ಚಿಸಿದ್ದಾರೆ. ಅದಲ್ಲದೇ ಸೇನಾ ವಿನ್ಯಾಸವನ್ನು ಅವರು ಅವಲೋಕಿಸಲಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೊದಲು ನಮ್ಮನ್ನು ಬೆಂಬಲಿಸಿ.












