ಎಚ್ಎಫ್ ಇಂಡಿಯಾ ವತಿಯಿಂದ ಪ್ರಾಜೆಕ್ಟ್ ಆಶಿಯಾನ ಅಡಿಯಲ್ಲಿ 24ನೇ ಮನೆ ಹಸ್ತಾಂತರ

0
276

ಸನ್ಮಾರ್ಗ ವಾರ್ತೆ

ನೆಲ್ಯಾಡಿ: ಬಡವರಿಗೆ, ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡುವ ಎಚ್ಎಫ್ ಪ್ರಾಜೆಕ್ಟ್ ಆಶಿಯಾನದ ಅಡಿಯಲ್ಲಿ 24ನೇ ಮನೆಯನ್ನು ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ವಿಧವೆಯೊಬ್ಬರಿಗೆ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಏಹ್ಸಾನ್(EHSAAN) ಮಸೀದಿಯ ಖತೀಬರಾದ ಮೌಲಾನಾ ತಯ್ಯಬ್‌ರವರು ದುಆ‌ದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಹೊಸಮಜಲು ಜುಮಾ ಮಸೀದಿಯ ಖತೀಬರಾದ ಉಮರ್ ಕುನ್ನಿ ಮುಸ್ಲಿಯಾರ್ ಹೊಸಮನೆಯ ಕೈ ಕೀಲಿ ಮತ್ತು ಒಂದು ತಿಂಗಳ ಮಾಸಿಕ ರೇಷನ್‌ ಅನ್ನು ಫಲಾನುಭವಿಗೆ ಹಸ್ತಾಂತರಿಸಿದರು. ಎಚ್ಎಫ್‌ನ ತಂಡ ಮಾಡಿದಂತಹ ಸಮಾಜಮುಖಿ ಕಾರ್ಯಗಳು ನಿಜವಾಗಿಯೂ ಶ್ಲಾಘನೀಯ ಎಂದು ನುಡಿದರು. ಎಚ್ಎಫ್ ಇಂಡಿಯಾ ಅಧ್ಯಕ್ಷ ನಾಜಿಮ್ ಏ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಉಳ್ಳಾಲ ಅಳೇಕಲದಲ್ಲಿ 25ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ನೌಶಾದ್ ಏ.ಕೆರವರು ತಿಳಿಸಿದರು. ಸಉದ್ ಕಿರಾತಕ ಪಠಿಸಿದರು. ಔಸಾಫ್ ಹುಸೇನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.