ಮಂಗಳೂರು: ಮಾದಕ ಪದಾರ್ಥ, ಅಶ್ಲೀಲತೆಯ ವಿರುದ್ಧ ವುಮೆನ್ಸ್ ಇಂಡಿಯಾ ಮೂವ್ ಮೆಂಟ್ ( WIM) ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಅದರಲ್ಲೂ ದ ಕ ಜಿಲ್ಲೆಯಲ್ಲಿ ಮಾದಕ ಪದಾರ್ಥಗಳಿಂದ ಆಗುತ್ತಿರುವ ಅನಾಹುತ ಮತ್ತು ಅದು ಲೈಂಗಿಕ ಹಿಂಸೆ, ಅತ್ಯಾಚಾರಗಳಂಥ ಭಯಾನಕ ಕೃತ್ಯಗಳನ್ನು ಸುಲಭಗೊಳಿಸುತ್ತಿರುವ ಬಗ್ಗೆ ವ್ಯವಸ್ಥೆಯ ಗಮನ ಸೆಳೆಯಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ನ್ಯಾಶನಲ್ ವುಮೆನ್ಸ್ ಫ್ರ೦ಟ್ ನ ರಾಜ್ಯ ಸಮಿತಿ ಸದಸ್ಯೆ ಫರ್ಜಾನ ಉಪ್ಪಿನಂಗಡಿ, ವುಮೆನ್ಸ್ ಇಂಡಿಯಾ ಮೂವ್ ಮೆಂಟ್ ನ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಕ್ಯಾ೦ಪಸ್ ಫ್ರ೦ಟ್ ನ ರಾಷ್ಟ್ರೀಯ ಸಮಿತಿಯ ಸದಸ್ಯೆ ಮಿಸ್ರಿಯಾ ಪುತ್ತೂರು, ವುಮೆನ್ಸ್ ಇಂಡಿಯಾ ಮೂವ್ ಮೆಂಟ್ ನ ಜಿಲ್ಲಾ ಕಾರ್ಯದರ್ಶಿ ಮತ್ತು ನ್ಯಾಯವಾದಿಯಾಗಿರುವ ರುಬಿಯಾ ಮುಂತಾದವರು ಮಾತಾಡಿದರು. ಪ್ರತಿಭಟನಾ ಸಭೆಯ ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ನಿಯೋಗದಲ್ಲಿ WIM ಜಿಲ್ಲಾ ಕೋಶಾಧಿಕಾರಿ ಝುಲೈಖಾ ಪರ್ಲಿಯಾ, WIM ನ ರಾಜ್ಯ ಕಾರ್ಯದರ್ಶಿ ಆಯಿಷಾ ಬಜ್ಪೆ ಮತ್ತಿತರರು ಇದ್ದರು.
















