ರೈಲಿನಿಂದ ಇಳಿಯುವಾಗ ಬೀಳುತ್ತಿದ್ದ ಗರ್ಭಿಣಿಯನ್ನು ರಕ್ಷಿಸಿದ ಆರ್​ಪಿಎಫ್​ ಕಾನ್​ಸ್ಟೆಬಲ್- ವಿಡಿಯೋ ವೈರಲ್​

0
363

ಸನ್ಮಾರ್ಗ ವಾರ್ತೆ

ನಿನ್ನೆ ಕಲ್ಯಾಣ್ ನಿಲ್ದಾಣದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಇಳಿಯುತ್ತಿದ್ದಾಗ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಬೀಳುತ್ತಿದ್ದ ಗರ್ಭಿಣಿಯನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೇಬಲ್ ಎಸ್‌.ಆರ್ ಖಾಂಡೇಕರ್ ಸಾಹಸಿಕವಾಗಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.

ಖಾಂಡೇಕರ್ ಬೋರಲಾಗಿ ಬೀಳುತ್ತಿದ್ದ ಗರ್ಭಿಣಿಯ ಹೊಟ್ಟೆ ನೆಲಕ್ಕೆ ತಾಗದಂತೆ ತಡೆದು ತಾವೇ ನೆಲಕ್ಕೊರಗಿ  ಯಾವುದೇ ಪ್ರಾಣಾಪಾಯವಿಲ್ಲದೇ ರಕ್ಷಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.