ಗುಂಪು ಘರ್ಷಣೆ; ಅಂಗಡಿ, ವಾಹನಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

0
408

ಜೈಪುರ: ರಾಜಸ್ಥಾನದ ಜೋಧಪುರದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸಧಿಕಾರಿಗಳಿಗೆ ಗಾಯಗಳಾಗಿವೆ. ಗಲಭೆ ನಿರತರು ಒಂದು ಅಂಗಡಿಗೆ ಬೆಂಕಿ ಹಚ್ಚಿದರು. ಎರಡು ವಾಹನಗಳಿಗೆ ಹಾನಿ ಮಾಡಿದ್ದಾರೆ. ಈದ್ ಗಾಹ್ ಗೆ ಗೇಟು ನಿರ್ಮಾಣಕ್ಕೆ ಸಂಬಂಧಿಸಿ ಕೋಮು ಘರ್ಷಣೆ ಸ್ಫೋಟಗೊಂಡಿದೆ.

ಶುಕ್ರವಾರ ರಾತ್ರೆಯ ಹೊತ್ತಿಗೆ ಗಲಭೆ ಶುರುವಾಯಿತು. ಸೂರ್ ಸಾಗರ್ ಪ್ರದೇಶದ ರಾಜಾರಾಂ ಸರ್ಕಲ್‍ನ ಸಮೀಪದಲ್ಲಿ ಈದ್‍ಗಾಹ್‍ನ ಹಿಂಬದಿಯಲ್ಲಿ ಗೇಟು ನಿರ್ಮಿಸುವ ಕುರಿತು ಚರ್ಚೆಗಳು ನಡೆದಿತ್ತು. ಆದರೆ ಸ್ಥಳೀಯರು ಗೇಟ್ ನಿರ್ಮಿಸುವುದನ್ನು ವಿರೋಧಿಸಿದ್ದಾರೆ. ನಂತರ ಎರಡು ಕೋಮಿನ ನಡುವೆ ಘರ್ಷಣೆ ತೀವ್ರಗೊಂಡು ಕಲ್ಲೆಸೆತ ಸಹಿತ ಇತರ ಅಹಿತಕರ ಘಟನೆಗಳು ನಡೆಯಿತು.

ಗಲಭೆ ನಿಯಂತ್ರಣದಲ್ಲಿದೆ. ಆದರೂ ಕಳೆದ ದಿವಸ ರಾತ್ರೆಯಿಂದ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ಘಟನೆಯ ಸ್ಥಳದಲ್ಲಿ ಕಾವಲಿದ್ದ ಪೊಲೀಸರ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುವ ವೇಳೆಯೇ ದಾರಿಯ ಬದಿಯಲ್ಲಿದ್ದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ದೊಂಬಿಕೋರರನ್ನು ಪೊಲೀಸರು ಆಶ್ರುವಾಯು ಪ್ರಯೋಗಿಸಿ ಚದುರಿಸಿದರು. ಇದೇವೇಳೆ ಎರಡು ಕಡೆಯವರೂ ನೀಡಿದ ದೂರನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು. ಎರಡೂ ಕೋಮಿನಿಂದ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿಸಿಕೊಂಡಿರುವ ಇನ್ನೂ ಕೆಲವರನ್ನು ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಕಮಿಶನರ್ ರಾಜೇಂದ್ರ ಸಿಂಗ್ ತಿಳಿಸಿದರು.