ನಾಳೆಯಿಂದ ಉಪವಾಸ ವ್ರತ ಆರಂಭ: ದ ಕ ಮತ್ತು ಉಡುಪಿ ಕಾಝಿ

0
904

ಸನ್ಮಾರ್ಗ ವಾರ್ತೆ

ಮಂಗಳೂರು ಏಪ್ರಿಲ್ 23- ಕೇರಳದ ಕಾಪಾಡ್ ಎಂಬಲ್ಲಿ ಚಂದ್ರದರ್ಶನವಾಗಿರುವುದರಿಂದ ನಾಳೆಯಿಂದ ( ಶುಕ್ರವಾರ ಏಪ್ರಿಲ್ 24) ಉಪವಾಸ ವ್ರತ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಕಾಝಿ ಬೇಕಲ ಉಸ್ತಾದ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲ ಮಸೀದಿಗಳಲ್ಲೂ ತಕ್ಬೀರ್ ಘೋಷಣೆಯೊಂದಿಗೆ ಚಂದ್ರ ದರ್ಶನವನ್ನು ಘೋಷಿಸಿದ್ದು, ಮುಸ್ಲಿಮರ ಮನೆಗಳಲ್ಲಿ ಉಪವಾಸಕ್ಕೆ ತಯಾರಿಗಳು ನಡೆಯುತೊಡಗಿವೆ. ಕೊರೋನಾದಿಂದಾಗಿ ಮಸೀದಿಯಲ್ಲಿ ನಮಾಜ್ ಮಾಡಲು, ತರಾವೀಹ್ ನಮಾಜ್ ನಿರ್ವಹಿಸಲು ಮತ್ತು ಉಪವಾಸ ಪಾರಣೆ ಯಂತಹ ಸಾಮೂಹಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುಮತಿ ಇಲ್ಲದಿರುವ ಮೊದಲ ಉಪವಾಸವಾಗಿ ಈ ಬಾರಿಯ ಉಪವಾಸ ವ್ರತ ವಿಶೇಷವಾಗಿ ಗುರುತಿಸಿಕೊಳ್ಳಲಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.