ಪಂಜಾಬ್: ರ‌್ಯಾಪರ್ ಸಿಧು ಮೂಸೆವಾಲ ಕಾಂಗ್ರೆಸ್ ಸೇರ್ಪಡೆ

0
254

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಂಜಾಬಿ ರ‌್ಯಾಪರ್ ಸಿಧು ಮೂಸೆವಾಲ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಇವರ ನಿಜನಾಮಧೇಯ ಗುಭ್‍ದೀಪ್ ಸಿಂಗ್ ಸಿಧು. ಶುಕ್ರವಾರ ಚಂಡೀಗಢದಲ್ಲಿ ಇವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‍ನಲ್ಲಿ ಸ್ಪರ್ಧಿಸಲಿದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಿಧು ಪಾಪ್ ತಾರೆಯಾಗಿದ್ದಾರೆ. ಅವರ ಯುಟ್ಯೂಬ್ ಚ್ಯಾನೆಲ್‍ಗೆ 52 ಲಕ್ಷ ಸಬ್‍‌ಸ್ಕ್ರೈಬರ್ಸ್ ಇದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದು, ಪಂಜಾಬಿನ ಮೂಸ ಗ್ರಾಮ ಅವರ ಹುಟ್ಟೂರು.

ಬಂದೂಕು ಸಂಸ್ಕೃತಿಯನ್ನು ಪ್ರೋತ್ಸಾಹಿಸಿದ ಮತ್ತು ಉದ್ರಿಕ್ತ ಹಾಡುಗಳನ್ನು ಹಾಡಿದುದಕ್ಕೆ ಅವರ ವಿರುದ್ಧ ಹಲವು ಬಾರಿ ಟೀಕೆಗಳು ಎದ್ದಿತ್ತು. 2017ರಲ್ಲಿ ಹೊರಬಂದ ಸೊಹೈ ಎಂಬ ಹಾಡು ಪಂಜಾಬಿನ ಯುವಕರ ನಡುವೆ ಜನಪ್ರಿಯವಾಗಿತ್ತು. ವಿಡಿಯೋಗಳ ಮೂಲಕ ಅಕ್ರಮಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಿಧು ವಿರುದ್ಧ ಪ್ರಕರಣಗಳು ಕೂಡ ದಾಖಲಾಗಿವೆ.