ಪತ್ರಕರ್ತ ರವೀಶ್ ಕುಮಾರ್ ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

0
635

.ಹೊಸದಿಲ್ಲಿ, ಆ. 2: ಹಿರಿಯ ಪತ್ರಕರ್ತ ಎನ್‍ಡಿವಿಯ ಮ್ಯಾನೇಜಿಂಗ್ ಎಡಿಟರ್ ರವೀಶ್ ಕುಮಾರ್ ಗೆ 2019ರ ರಮಣ್ ಮ್ಯಾಗ್ಸೆಸೆ ಪ್ರಶಸ್ತಿ ಸಿಕ್ಕಿದೆ. ಈ ವರ್ಷ ಐವರು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕೊ ಸ್ವೆ ವಿನ್ (ಮ್ಯಾನ್ಮಾರ್), ಅಂಗ್‍ಕಾನ ನೀಲಾಪಯಿಜಿತ್ (ಥಾಯ್ ಲೆಂಡ್), ರೊಯ್ಮುಂಡೊ ಪುಆಂಟ್ ಕಾಯ್ಬ್ಯಾಬ್ (ಫಿಲಿಪ್ಪಿನ್ಸ್), ಕಿಂ ಜೊಂಗ್ ಕಿ (ದಕ್ಷಿಣ ಕೊರಿಯ) ಇವರು ಪ್ರಶಸ್ತಿಗೆ ಭಾಜನರಾದರು. ಫಿಲಿಪ್ಪಿನ್ಸ್ ಅಧ್ಯಕ್ಷರಾದ ರಮಣ್ ಮ್ಯಾಗ್ಸೆಸೆ ಸ್ಮರಣಾರ್ಥ 1957ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಾರ್ವಜನಿಕ ಸೇವೆ, ಸಾಮುದಾಯಿಕ ನೇತೃತ್ವ, ಪತ್ರಕರ್ತರು, ಶಾಂತಿ ಕ್ಷೇತ್ರಗಳ ಕೊಡುಗೆಗಾಗಿ ಮ್ಯಾಗ್ಸೆಸೆ ನೀಡಲಾಗುತ್ತಿದೆ.