ಪ್ಲೇಟ್‍ನಿಂದ ಹೊರ ಹಾರುತ್ತಿರುವ ಕೋಳಿ ಮಾಂಸ: ಕೋಟ್ಯಂತರ ಮಂದಿಯಿಂದ ವೀಡಿಯೊ ವೀಕ್ಷಣೆ

0
1216

ಪ್ಲೊರಿಡಾ, ಜು. 31: ತುಂಡು ಮಾಡಿ ಶುಚಿಗೊಳಿಸಿ ಬೇಯಿಸಲು ಸಿದ್ಧಪಡಿಸಿದ ಚಿಕನ್ ಪೀಸ್ ಪ್ಲೇಟಿನಿಂದ ಹೊರಹಾರಿದರೆ ಹೇಗಿರಬಹುದು? ಹೀಗೊಂದು ವೀಡಿಯೊ ಆನ್‍ಲೈನ್‍ನಲ್ಲಿ ವೈರಲ್ ಆಗಿದೆ. ಇದನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. ಫ್ಲೊರಿಡಾದ ರೇ ಫಿಲಿಪ್ಸ್ ಎನ್ನುವ ವ್ಯಕ್ತಿ ಈ ವೀಡಿಯೊವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ. ಒಂದು ರೆಸ್ಟೊರೆಂಟಿನ ಅಡಿಗೆ ಕೋಣೆಯ ಟೇಬಲ್‍ನಲ್ಲಿ ಹೀಗಾಗಿದೆ. ಬೇಯಿಸಲು ಅಲ್ಲಿ ಮಾಂಸದ ತುಂಡನ್ನು ಶುಚಿಗೊಳಿಸಿಡಲಾಗಿತ್ತು. ಆದರೆ ಅವುಗಳಲ್ಲಿ ಒಂದು ತುಂಡು ಪ್ಲೇಟಿನಿಂದ ಹೊರಗೆ ಚಡಪಡಿಸಿಕೊಂಡು ಹೋಗಿ ಬೀಳುತ್ತಿದೆ. ಇದನ್ನು ಸುತ್ತಲೂ ನೆರೆದವರು ಆಶ್ಚರ್ಯದಿಂದ ನೋಡುತ್ತಿದ್ದಾರೆ.

ಯಾವ ಊರಿನ ರೆಸ್ಟೂರೆಂಟ್ ಎಂದು ರೇ ಫಿಲಿಪ್ಸ್ ಸ್ಪಷ್ಟಪಡಿಸಿಲ್ಲ. ಆದರೆ ಪ್ಲೇಟಿನ ಸುತ್ತ ಇದ್ದ ಚೊಪ್‍ಸ್ಟಿಕ್‍ಗಳು ಇದೊಂದು ಜಪಾನ್ ರೆಸ್ಟೊರೆಂಟ್ ಎಂಬ ಸುಳಿವು ನೀಡುತ್ತಿದೆ ಎಂದು ನ್ಯೂಯಾರ್ಕ್‍ ಪೋಸ್ಟ್ ವರದಿ ಮಾಡಿದೆ.

Whatttt Thaaaa Fuckkkkk 🤮… This was not recorded by me… all I did was repost the video TheShade Room

Posted by Rie Phillips on Tuesday, July 9, 2019