ಸನ್ಮಾರ್ಗ ವಾರ್ತೆ
ವಾನ್‍ಕುವರ್: ಬುಡಕಟ್ಟು ಮಕ್ಕಳ ರೆಸಿಡೆನ್ಶಿಯಲ್ ಸ್ಕೂಲ್ ಕಟ್ಟಡದ ವರಾಂಡದಲ್ಲಿ ಮೂರು ವರ್ಷದ ಮಗುವಿನ ಸಹಿತ 215 ಮಕ್ಕಳ ಮೃತದೇಹದ ಅವಶೇಷಗಳು ದೊರಕಿದ್ದು ಇಡೀ ಕೆನಡಾಕ್ಕೆ ಕೆನಡವೇ ಗರಬಡಿದು ನಿಂತಿದೆ. ಕೆನಡದ ಪಶ್ಚಿಮ ವಲಯ ಬ್ರಿಟಿಷ್ ಕೊಲೊಂಬಿಯದಲ್ಲಿ ಮಕ್ಕಳ ಅಸ್ಥಿಪಂಜರಗಳು ಪತ್ತೆಯಾಗಿವೆ.
ಗೋತ್ರವಿಭಾಗದ ಮಕ್ಕಳನ್ನು ಶಿಕ್ಷಣದ ಹೆಸರಿನಲ್ಲಿ ಬಲವಂತದಿಂದ ಇಲ್ಲಿಗೆ ಕರೆತಂದು ಇರಿಸಿಕೊಳ್ಳಲಾಗುತ್ತಿದೆ. ಇಂತಹ ಬೆರೆಳೆಣಿಕೆಯ ಶಿಕ್ಷಣಾಲಯಗಳಲ್ಲಿ ಇದು ಒಂದಾಗಿದೆ. ಕ್ರೈಸ್ತ ಚರ್ಚಿನ ಮೇಲುಸ್ತುವಾರಿಯಲ್ಲಿ 1830ರಿಂದ 1990ರವರೆಗೆ ಇತ್ತು. ಕುಟುಂಬಗಳ ವಿರೋಧದ ನಡುವೆಯೂ ತಂದೆ-ತಾಯಿ, ಸಹೋದರರಿಂದ ಬೇರ್ಪಡಿಸಿ ಬಲವಂತವಾಗಿ ಮಕ್ಕಳನ್ನು ಈ ಶಾಲೆಗೆ ಸೇರಿಸಲಾಗುತ್ತಿತು.
ಈ ಹಿಂದೆಯೂ ಇದೇ ಕಾರಣಕ್ಕಾಗಿ ರೆಸಿಡೆನ್ಶಿಯಲ್ ಶಾಲೆಯೊಂದನ್ನು 1978ರಲ್ಲಿ ಮುಚ್ಚಲಾಗಿತ್ತು. ಈ ಸ್ಕೂಲ್ ಸಹಿತ ಮಕ್ಕಳಿಗೆ ರೆಸಿಡೆನ್ಶಿಯಲ್ ಸ್ಕೂಲ್‍ನಲ್ಲಿ ಕಠಿಣ ಹಿಂಸೆ ನೀಡಲಾಗುತ್ತಿದೆ. ಅತ್ಯಾಚಾರ ಕೂಡ ನಡೆಯುತ್ತಿದೆ. ಸರಿಯಾದ ಪೋಷಣೆಯೂ ದೊರಕುತ್ತಿಲ್ಲ ಎಂದು ಇತ್ತೀಚೆಗೆ ನಡೆಸಲಾಗಿದ್ದ ತನಿಖೆಯಿಂದ ಬೆಳಕಿಗೆ ಬಂದಿತ್ತು. ಕಲಿಸುವುದಾಗಿ ಇಲ್ಲಿಗೆ ತಂದ ಸುಮಾರು 6000 ಮಕ್ಕಳು ಬೇರೆ ಬೇರೆ ಶಾಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕಾಮಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್‍ನ ಲೆಕ್ಕ ಸೇರಿಲ್ಲ. ಬೇರೆಲ್ಲ ಶಾಲೆಗಳ ಮಕ್ಕಳ ಮರಣ ಸಂಖ್ಯೆ ಸೇರಿಸಿದರೆ ಮಕ್ಕಳ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಬಹುದು.













