ಸನ್ಮಾರ್ಗ ವಾರ್ತೆ
ಮುಸ್ಲಿಮರ ವಿರುದ್ಧ ಪದೇ ಪದೇ ದ್ವೇಷ ಭಾಷಣ ಮಾಡುತ್ತಿರುವ ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ ವಿರುದ್ಧ ಕೇಂದ್ರ ಸಚಿವರೆ ಹರಿಹಾಯ್ದಿದ್ದಾರೆ.
ಮುಸ್ಲಿಮರು ನಮ್ಮವರು, ಈ ದೇಶ ಸಂವಿಧಾನವನ್ನು ಅನುಸರಿಸಿ ನಡೆಯಬೇಕಾಗಿದೆ. ಮುಸ್ಲಿಮರನ್ನು ನಿರಂತರ ದ್ವೇಷಿಸುವುದನ್ನು ನಿಲ್ಲಿಸಬೇಕಾಗಿದೆ ಎಂದು ಕೇಂದ್ರ ಸಚಿವ ರಾಮ್ದಾಸ್ ಅಟವಳೆ ಆಗ್ರಹಿಸಿದ್ದಾರೆ.
ಚುನಾವಣೆಯನ್ನು ಗೆಲ್ಲುವುದಕ್ಕೆ ನಮಗೆ ಮುಸ್ಲಿಮರ ಓಟಿನ ಅಗತ್ಯವಿಲ್ಲ. ಈವಿಎಂ ಎಂದರೆ ಎವ್ರಿ ಓಟ್ ಎಗೈನ್ ಸ್ಟ್ ಮುಲ್ಲಾ ಎಂದು ಈ ನಿತೀಶ್ ರಾಣೆ ದಿನದ ಹಿಂದೆ ಹೇಳಿದ್ದರು.
ಹಿಂದುಗಳು ಒಗ್ಗಟ್ಟಾಗಿ ಹಿಂದುಗಳಿಗೆ ಮತದಾನ ಮಾಡುತ್ತಿರುವುದರಿಂದಲೇ ವಿರೋಧಿಗಳು ಇ ವಿ ಎಂ ಅನ್ನು ಪ್ರಶ್ನಿಸುತ್ತಿದ್ದಾರೆ ಎಂದವರು ಈ ಸಭೆಯಲ್ಲಿ ಹೇಳಿದ್ದರು. ಮಾತ್ರ ಅಲ್ಲ ಇದಕ್ಕಿಂತ ಮೊದಲು ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರು.












