ಮದೀನಾದ ಐತಿಹಾಸಿಕ ಸಬಾ ಮಸೀದಿ

0
63

ಸನ್ಮಾರ್ಗ ವಾರ್ತೆ

ಮದೀನಾ: ಮದೀನಾದ ಸಲ್ಆ ಎಂಬ ಪರ್ವತದಲ್ಲಿರುವ ಬನಿ ಹರಂ ಗುಹೆಯು ಪ್ರವಾದಿ ಮುಹಮ್ಮದ್ ರ ಜೊತೆಗಿನ ಸಂಬಂಧಕ್ಕಾಗಿ ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಇದು ಮದೀನಾದ ಪಶ್ಚಿಮ ಭಾಗದಲ್ಲಿದೆ. ಪ್ರವಾದಿ ಮುಹಮ್ಮದ್ ಸಹಚರರಲ್ಲಿ ಒಬ್ಬರಾದ ಜಾಬಿರ್ ಬಿನ್ ಅಬ್ದುಲ್ಲಾ ಅವರು ಈ ಪರ್ವತದ ಕೆಳಭಾಗದಲ್ಲಿ ವಾಸಿಸುತ್ತಿದ್ದರು.

ಹಿಜ್ರಾ ಐದನೇ ವರ್ಷದಲ್ಲಿ ನಡೆದ ಕಂದಕ್ ಯುದ್ಧದ ವೇಳೆ ಪ್ರವಾದಿ ಮಹಮ್ಮದರು ಈ ಗುಹೆಯಲ್ಲಿ ಹಲವು ರಾತ್ರಿಗಳನ್ನು ಕಳೆದಿದ್ದರು. ಆ ದಿನಗಳಲ್ಲಿ ಮದೀನಾದಲ್ಲಿ ಕಟು ಚಳಿಯಿತ್ತು. ಆ ಚಳಿಯಿಂದ ರಕ್ಷಿಸಿಕೊಳ್ಳುವುದಕ್ಕೂ ಈ ಗುಹೆಯನ್ನು ಅವರು ಬಳಸಿದ್ದರು. ಪ್ರವಾದಿ ಮುಹಮ್ಮದ್ ರು ಈ ಗುಹೆಯಲ್ಲಿ ದೀರ್ಘಕಾಲ ನಮಾಜಿನಲ್ಲಿ ನಿರತರಾಗಿರುತ್ತಿದ್ದರು ಎಂದು ಅವರ ಸಹಚರ ಮುಆದ್ ಬಿನ್ ಜಬಲ್ ಹೇಳಿದ್ದಾರೆ. ಇವತ್ತು ಈ ಪ್ರದೇಶವು ಏಳು ಮಸೀದಿಗಳಿರುವ ಸ್ಥಳ ಎಂಬ ಹೆಸರಲ್ಲಿ ಸಬ್ ಆ ಮಸಾಜೀದ್ ಎಂದು ಗುರುತಿಸಿಕೊಳ್ಳುತ್ತಿದೆ. ಕಂದಕ್ ಯುದ್ಧದ ವೇಳೆ ಪ್ರವಾದಿ ಮುಹಮ್ಮದ್ ರ ಜೊತೆ ಅವರ ಪ್ರಮುಖ ಅನುಯಾಯಿಗಳು ನಿಂತ ಸ್ಥಳ ಇದಾಗಿದ್ದು ಆ ಬಳಿಕ ಈ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಬೃಹತ್ ಮಸೀದಿಯನ್ನು ನಿರ್ಮಿಸಲಾಗಿದ್ದು ಇದರಲ್ಲಿ ಏಕಕಾಲದಲ್ಲಿ 4000 ಮಂದಿ ನಮಾಜ್ ನಿರ್ವಹಿಸಬಹುದಾಗಿದೆ