ಧರ್ಮ ಸಂಸದ್‌ನಲ್ಲಿ ಮತ್ತೊಂದು ದ್ವೇಷ ಭಾಷಣ: ಗಾಂಧಿ ಹಂತಕನನ್ನು ಹೊಗಳಿದ ಸನ್ಯಾಸಿ ಕಾಳಿಚರಣ್ ಮಹಾರಾಜ; ವಿರೋಧಿಸಿ ವೇದಿಕೆ ತೊರೆದ ರಾಮ್ ಸುಂದರ್ ಮಹಾರಾಜ್

0
276

ಸನ್ಮಾರ್ಗ ವಾರ್ತೆ

ರಾಯಪುರ: ಹರಿದ್ವಾರದ ಸನ್ಯಾಸಿಗಳ ಸಮ್ಮೇಳನದ ನಂತರ ಛತ್ತೀಸ್ಗಡದ ರಾಯಪುರದಲ್ಲಿ ಅಯೋಜಿಸಲಾದ ಧರ್ಮ ಸಂಸದ್‌ನಲ್ಲಿಯೂ ದ್ವೇಷ ಭಾಷಣ ನೀಡಲಾಗಿದೆ. ಸನ್ಯಾಸಿ ಕಾಳಿಚರಣ್ ಮಹಾರಾಜ ದ್ವೇಷ ಪೂರಿತ ಭಾಷಣ ಮಾಡಿದ್ದು, ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಲೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಪ್ರಶಂಸಿ ಭಾಷಣ ಮಾಡಿದ್ದಾರೆ. ಮಹಾತ್ಮಾ ಗಾಂಧಿಯನ್ನು ಅವಹೇಳನ ಗೈದಿದ್ದನ್ನು ವಿರೋಧಿಸಿ ಪ್ರತಿಭಟಸಿದ ರಾಮ್ ಸುಂದರ್ ಮಹಾಜ್ ವೇದಿಕೆ ತೊರೆದು ಹೋದರು. ಎರಡು ದಿವಸಗಳ ಸಮ್ಮೇಳನ ಗುರುವಾರ ಕೊನೆಗೊಂಡಿತು.

ಹರಿದ್ವಾರದಲ್ಲಿ ನಡೆದ ಸಂಸತ್ತಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನೀಡಿದ ಕೋಮುಪ್ರಚೋದಕ ಭಾಷಣ ಸುದ್ದಿಯಾಗಿತ್ತು.

ರಾಜಕೀಯದ ಮೂಲಕ ದೇಶವನ್ನು ವಶಪಡಿಸಿಕೊಳ್ಳುವುದು ಮುಸ್ಲಿಮರ ಉದ್ದೇಶವಾಗಿದೆ ಎಂದು ಕಾಳಿಚರಣ್ ಮಹಾರಾಜ ಹೇಳಿದ್ದಾರೆ. ಗಾಂಧಿಯನ್ನು ಕೊಲೆ ಮಾಡಿದ ನಾಥೂರಾಮ್ ಗೋಡ್ಸೆಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ ಎಂದು ಕಾಳಿಚರಣ್ ಸಮ್ಮೇಳನದಲ್ಲಿ ಹೇಳಿದರು. ಇವರ ಹೇಳಿಕೆಯನ್ನು ಖಂಡಿಸಿ ರಾಜಕಾರಿಣಿಗಳ ಸಹಿತ ಹಲವಾರು ಮಂದಿ ರಂಗಪ್ರವೇಶಿಸಿದ್ದಾರೆ.