ಮದ್ಯದಲ್ಲಿ ಸಾನಿಟೈಸರ್ ಬೆರೆಸಿ ಕುಡಿದವರ ಸಾವು

0
1064

ಸನ್ಮಾರ್ಗ ವಾರ್ತೆ

ಬೆಂಗಳೂರು, ಎ. 21: ಗುಣಮಟ್ಟರಹಿತ ಮದ್ಯಕ್ಕೆ ಹ್ಯಾಂಡ್ ವಾಶ್ ಸಾನಿಟೈಸರ್ ಸೇರಿಸಿ ಕುಡಿದ ಅಕ್ಕಮತ್ತು ತಮ್ಮ ಮೃತಪಟ್ಟಿದ್ದಾರೆ. ಧಾರಾವಾಡದ ಕಲಘಟಗಿ ತಾಲೂಕಿನ ಗಾಂಬಿಯಾಪುರ ಗ್ರಾಮದ ಕೂಲಿ ಕೆಲಸ ಮಾಡುವ ಬಸವರಾಜ್ ವೆಂಕಪ್ಪ(45), ಸಹೋದರಿ ಜಾಂಬವಿ(47 ಮೃತಪಟ್ಟ ನತದೃಷ್ಟರು.

ಇಬ್ಬರ ಮದ್ಯ ಕುಡಿಯುವವರು ಆಗಿದ್ದು ಮದ್ಯಮಾರಾಟ ನಿಷೇಧದಿಂದ ಇಬ್ಬರೂ ಖಿನ್ನತೆಗೊಳಗಾಗಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸಾನಿಟೈಸರ್ ನಲ್ಲಿ ಮದ್ಯದ ಅಂಶ ಇದೆ ಎಂದು ತಿಳಿದು ಇಬ್ಬರೂ ಕಳೆದ ನಾಲ್ಕು ದಿವಸಗಳಿಂದ ಅದನ್ನು ಮದ್ಯಕ್ಕೆ ಬೆರೆಸಿ ನಿರಂತರ ಕುಡಿಯುತ್ತಿದ್ದರು. ಗ್ರಾಮದಲ್ಲಿ ತಯಾರಿಸುವ ಕಳ್ಳಭಟ್ಟಿಯನ್ನು ತಂದ ಬಳಿಕ ಬಸವರಾಜ್ ಅದಕ್ಕೆ ಸಾನಿಟೈಸ್ ಸುರಿಯುತ್ತಿದ್ದ.

ಮೆಡಿಕಲ್ ಶಾಪ್‍ನಿಂದ ಈತ ಸಾನಿಟೈಸರ್ ಖರೀದಿಸಿ ತಂದಿಟ್ಟುಕೊಂಡಿದ್ದ. ಶನಿವಾರ ತೀವ್ರ ಹೊಟ್ಟೆನೋವಿಗೆ ಇಬ್ಬರನ್ನೂ ಧಾರಾವಾಡದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಹೆಚ್ಚು ಬಿಗಡಾಯಿಸಿದ್ದರಿಂದ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಔಷಧಕ್ಕೆ ಪ್ರತಿಕ್ರಿಯಿಸದೆ ರವಿವಾರ ಬಸವರಾಜ್, ಸಂಜೆ ಜಾಂಬವಿ ಮೃತಪಟ್ಟಿದಾರೆ. ಸಾನಿಟೈಸರ್ ಅಂಗಾಂಗಗಳಿಗೆ ಹಾನಿಯೊಡ್ಡುತ್ತದೆ ಎಂದು ಈ ಹಿಂದೆಯೇ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.