ಶಾಲೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಉಪಯೋಗಿಸುವುದಕ್ಕೆ ನಿಷೇಧ ಹೇರಿದ ಸೌದಿ ಶಿಕ್ಷಣ ಸಚಿವಾಲಯ

0
816

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾ: ಒಂದೂವರೆ ವರ್ಷಗಳ ಬಳಿಕ ಸೌದಿಯಲ್ಲಿ ಮತ್ತೆ ಶಾಲೆಗಳು ಪ್ರಾರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಉಪಯೋಗಿಸುವುದನ್ನು ಸೌದಿ ಶಿಕ್ಷಣ ಸಚಿವಾಲಯ ನಿಷೇಧಿಸಿದೆ.

ವಿದ್ಯಾರ್ಥಿಗಳು ಶಾಲಾ ಪ್ರವೇಶಕ್ಕೆ ತವಕ್ಕಲ್ ಆಪ್ ನಲ್ಲಿ ತಮ್ಮ ಆರೋಗ್ಯ ಸ್ಥಿತಿಯನ್ನು ತೋರಿಸುವುದಕ್ಕಾಗಿ ಶಾಲಾ ಆರಂಭದಲ್ಲಿ ಮೊಬೈಲ್ ಫೋನನ್ನು ಇಟ್ಟುಕೊಳ್ಳಲು ಅವಕಾಶ ನೀಡಲಾಗಿತ್ತು. ಇದೀಗ ಈ ಅನುಮತಿಯನ್ನು ರದ್ದು ಪಡಿಸಲಾಗಿದೆ. ಮೊಬೈಲ್ ಫೋನನ್ನು ಮಕ್ಕಳು ದುರುಪಯೋಗಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬಂದ ಬಳಿಕ ಈ ನಿರ್ಧಾರವನ್ನು ತಾಳಲಾಗಿದೆ.

ಇನ್ನು ಮುಂದೆ ತವಕ್ಕಲ್ ಆಪ್ ನಲ್ಲಿರುವ ಆರೋಗ್ಯ ವಿವರವನ್ನು ಮೊಬೈಲ್ ನ ಬದಲು ಅದರ ಪ್ರಿಂಟೆಡ್ ಕಾಪಿಯನ್ನು ಮಕ್ಕಳು ಕೊಡಬೇಕು ಎಂದು ಆಜ್ಞಾಪಿಸಿಲಾಗಿದೆ. ಇನ್ನು ಮುಂದೆ ಮೊಬೈಲ್ ಫೋನ್ ಅಗತ್ಯವೆಂದರೆ ಅಧಿಕೃತ ಅನುಮತಿಯೊಂದಿಗೆ ಇಟ್ಟುಕೊಳ್ಳಬಹುದು ಎಂಬ ರಿಯಾಯಿತಿಯನ್ನೂ ನೀಡಲಾಗಿದೆ.