ಸೌದಿಯಲ್ಲಿ ಮಹಿಳೆಯರಿಗೆ ಸ್ವತಂತ್ರ ಪಾಸ್ ಪೋರ್ಟ್, ಪ್ರಯಾಣ ಅನುಮತಿ

0
431

ಜಿದ್ದ, ಆ. 2: ಸೌದಿ ಅರೇಬಿಯ ಮಹಿಳೆಯರಿಗೆ ಪುರಷ ರಕ್ಷಕರಿಲ್ಲದೆ ಪಾಸ್‍ಪೋರ್ಟ್ ಪಡೆಯಲು ಮತ್ತು ಪ್ರಯಾಣ ಮಾಡಲು ಅನುಮತಿ ನೀಡಿ ಆದೇಶ ನೀಡಿದೆ. ಇನ್ನು ಮುಂದೆ ವಯಸ್ಕ ಮಹಿಳೆಯರು ಸ್ವತಂತ್ರ ಪಾಸ್ ಪೋರ್ಟ್ ಹೊಂದಬಹುದು. ಪ್ರಯಾಣ ಮಾಡಬಹುದು. 21 ವರ್ಷ ಪೂರ್ತಿಯಾದ ಮಹಿಳೆಗೆ ಮಾತ್ರ ಈ ಅವಕಾಶ ಇದೆ. ಮಹಿಳೆಯರಿಗೆ ಮಕ್ಕಳ ಜನನ ನೋಂದಣಿ ಮಾಡುವ ಅನುಮತಿ ನೀಡಲಾಗಿದೆ. ಅಪ್ರಾಪ್ತ ಮಕ್ಕಳ ಪೋಷಣೆ ಜವಾಬ್ದಾರಿ ತಾಯಿ ವಹಿಸಿಕೊಳ್ಳಲು ಆದೇಶವಿದೆ.

ಈ ಹಿಂದೆ ಮಹಿಳೆಯರು ಪಾಸ್‍ಪೋರ್ಟಿಗೆ ಅರ್ಜಿ ಸಲ್ಲಿಸಲು ಪುರುಷ ಪೋಷಕರು ಬೇಕಿತ್ತು. ಒಂದೋ ಪತಿ ಅಥವಾ ತಂದೆಯ ಅನುಮತಿಯೊಂದಿಗೆ ಪಾಸ್‍ಪೋರ್ಟ್ ಪಡೆಯಬೇಕಿತ್ತು. ಅಪ್ರಾಪ್ತ ಮಕ್ಕಳ ಪೋಷಕತ್ವ ತಂದೆಗೆ ಮಾತ್ರ ಇತ್ತು. ಮಹಿಳೆಗೆ ವಾಹನ ಚಲಾಯಿಸುವ ನಿಷೇಧವನ್ನು ಕಳೆದ ವರ್ಷ ತೆರವು ಗೊಳಿಸಲಾಗಿತ್ತು. ಅದರ ನಂತರ ಮಹಿಳೆಯರಿಗೆ ಪಾಸ್‍ಪೋರ್ಟ್, ಸ್ವತಂತ್ರ ಪ್ರಯಾಣ ಹೊಂದು ಕುರಿತು ಈ ಹಿಂದೆಯೇ ಶೂರ ಕೌನ್ಸಿಲ್ ಚರ್ಚಿಸಿತ್ತು.