ಸೌದಿ: ರಿ ಎಂಟ್ರಿ ವೀಸಾಕ್ಕೆ ದುಪ್ಪಟ್ಟು ಶುಲ್ಕ

0
676

ಸನ್ಮಾರ್ಗ ವಾರ್ತೆ

ಸೌದಿಯಿಂದ ರೀ ಎಂಟ್ರಿ ವಿಸಾ ಅವಧಿಯನ್ನು ವಿಸ್ತರಿಸಲು ಯಾರು ಬಯಸುತ್ತಾರೋ ಅವರು ದ್ವಿಗುಣ ಶುಲ್ಕವನ್ನು ಕಟ್ಟಬೇಕಾಗಿದೆ. ರಜಾ ಕಾಲದಲ್ಲಿ ಭಾರತಕ್ಕೆ ಬಂದವರು ರೀ ಎಂಟ್ರಿಯ ಅವಧಿಯನ್ನು ದೀರ್ಘಗೊಳಿಸಬೇಕಾದರೆ ಇನ್ನು ಮುಂದೆ ಡಬಲ್ ಫೀಸ್ ಅನ್ನು ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ವರೆಗೆ ಒಂದು ತಿಂಗಳಿಗೆ 100 ರಿಯಾಲ್ ನೀಡಿ ರಿ ಎಂಟ್ರಿ ವೀಸಾವನ್ನು ದೀರ್ಘಗೊಳಿಸಬಹುದಾಗಿತ್ತು. ಇನ್ನು ಮುಂದೆ ಇದು 200 ರಿಯಾಲ್ ಆಗಲಿದೆ. ಎರಡು ತಿಂಗಳಿಗೆ 400 ರಿಯಾಲ್, ಮೂರು ತಿಂಗಳಿಗೆ 600 ರಿಯಾಲ್ ಮತ್ತು 4 ತಿಂಗಳಿಗೆ 800 ರಿಯಾಲ್ ನೀಡಬೇಕಾಗಿದೆ. ಒಂದು ವಾರ ಮೊದಲು ಬ್ಯಾಂಕುಗಳಲ್ಲಿ ಈ ಕುರಿತಾಗಿ ಹೊಸ ಅಪ್ಡೇಟ್ ಮಾಡಲಾಗಿದೆ.

ರಿ ಎಂಟ್ರಿ ವೀಸಾದಲ್ಲಿ ಸೌದಿ ಅರೇಬಿಯಾದಿಂದ ಹೊರಗಿದ್ದರೂ ರಿ ಎಂಟ್ರಿ ದೀರ್ಘಗೊಳಿಸಲು ಆನ್ಲೈನ್ ನಲ್ಲಿ ಸೌಲಭ್ಯವಿದೆ. ದೇಶದಿಂದ ಹೊರಗಿದ್ದರೂ ಇಕಾಮಾವನ್ನು ನವೀಕರಣಗೊಳಿಸಲು ಇದರಿಂದ ಸಾಧ್ಯವಿದೆ.