ಸೈಯದ್ ಝೈನುಲ್ ಆಬಿದೀನ್ ಬಾಫಕಿ ತಂಙಳ್ ನಿಧನ

0
390

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್: ಸೈಯದ್ ಝೈನುಲ್ ಆಬಿದೀನ್ ಬಾಫಕಿ ತಂಙಳ್ (82) ನಿಧನರಾದರು. ಅವರು ಮರ್ಕಝುಸ್ಸಖಾಫತಿ ಸುನ್ನಿಯಾ ಇದರ ಉಪಾಧ್ಯಕ್ಷರಾಗಿದ್ದರು ಮತ್ತು ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ರಾಜ್ಯ ಉಪಾಧ್ಯಕ್ಷರಾಗಿದ್ದರು. ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಸುದೀರ್ಘ 30 ವರ್ಷಗಳ ಕಾಲ ಮಲೇಷ್ಯಾದಲ್ಲಿ ಸೇವೆ ಸಲ್ಲಿಸಿದ್ದ ಅವರು ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಳೆ ಕೊಯಿಲಾಂಡಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.