ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 23: ಕೊರೊನಾ ಹರಡದಿರಲು ಜೈಲುಗಳಲ್ಲಿನ ದಟ್ಟಣೆ ಕಡಿಮೆ ಗೊಳಿಸಲು ಉದ್ದೇಶಿಸಲಾಗಿದ್ದು ಕೈದಿಗಳಿಗೆ ಪರೋಲ್ ಪರಿಗಣಿಸುವಂತೆ ಸುಪ್ರೀಂಕೋರ್ಟು ರಾಜ್ಯಗಳಿಗೆ ಸೂಚಿಸಿದೆ. ಯಾರಿಗೆ ಪರೋಲ್ ನೀಡಬೇಕು ಎಂಬ ಕುರಿತು ಮಾನದಂಡ ನಿರ್ಧರಿಸಲು ಉನ್ನತ ಅಧಿಕಾರಿಗಳ ಸಮಿತಿಯನ್ನು ನೇಮಕಗೊಳಿಸುವಂತೆ ಸುಪ್ರೀಂಕೋರ್ಟು ಸೂಚಿಸಿತು.
ಕೈದಿಗಳಿಗೆ ನಾಲ್ಕರಿಂದ ಆರು ವಾರ ಪರೋಲ್ ನೀಡಬೇಕು. ಏಳು ವರ್ಷಗಳ ವರೆಗೆ ಶಿಕ್ಷೆ ಅನುಭವಿಸುವವರಿಗೆ ಪರೋಲ್ ನೀಡುವುದು. ಇದಕ್ಕೆ ಉನ್ನತಾಧಿಕಾರ ಸಮಿತಿ, ರಾಜ್ಯ ಲೀಗಲ್ ಸರ್ವಿಸ್ ಅಥಾರಿಟಿಯೊಂದಿಗೆ ಸಮಾಲೋಚಿಸಿ ತೀರ್ಮಾನಕ್ಕೆ ಬರಬೇಕೆಂದು ಜಸ್ಟಿಸ್ ಬೊಬ್ಡೆ ನೇತೃತ್ವದ ಸುಪ್ರಿಂಕೋರ್ಟು ಪೀಠ ಆದೇಶ ನೀಡಿತು.
ಕೊರೊನ ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ದೇಶದಲ್ಲಿ ಬಂದ್ ನಂತರ ಕ್ರಮಗಳನ್ನು ಸರಕಾರ ಜಾರಿಗೊಳಿಸಿದೆ. ಭಾರತದಲ್ಲಿ 415 ಮಂದಿಗೆ ಕೊರೊನ ದೃಢಪಟ್ಟಿದೆ ಮತ್ತು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.












