ಸೆಗಣಿಯಿಂದ ಕೊರೊನ ಗುಣವಾಗುವುದಿಲ್ಲ ಎಂದು ಹೇಳಿದ ಮಣಿಪುರದ ಹೋರಾಟಗಾರನನ್ನು ಕೂಡಲೇ ಬಿಡುಗಡೆಗೊಳಿಸಬೇಕು: ಸುಪ್ರೀಂ ಕೋರ್ಟ್

0
554

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಫೇಸ್‍ಬುಕ್ ಪೋಸ್ಟ್ ನೆಪ ಮುಂದಿಟ್ಟು ಯುಎಪಿಎ ಹೊರಿಸಿ ಬಂಧಿಸಿದ ಮಣಿಪುರದ ಆಕ್ಟಿವಿಸ್ಟ್ ಎರಂಡ್ರೊ ಲೆಯ್‍ಚೋಂಪರನ್ನು ಬಿಡುಗಡೆಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮೇ 13 ರಂದು 40 ವರ್ಷದ ಎಂಡ್ರೋರನ್ನು ಮತ್ತು 41 ವರ್ಷದ ಕಿಶೋರ್ ಚಂದ್ರ ವಾಂಗ್‍ಕೇಮ್‍ರನ್ನು ಬಂಧಿಸಲಾಗಿತ್ತು.

ದನದ ಸೆಗಣಿ, ಮೂತ್ರದಿಂದ ಕೊರೊನ ಗುಣವಾಗುವುದಿಲ್ಲ ಎಂದು ಇಬ್ಬರೂ ಪೋಸ್ಟ್ ಹಾಕಿದ್ದರು. ಮಣಿಪುರದ ಬಿಜೆಪಿ ಅಧ್ಯಕ್ಷ ಎಸ್, ತಿಕೇಂದ್ರ ಸಿಂಗ್ ಕೊರೊನದಿಂದ ಮೇ 13ಕ್ಕೆ ಮೃತಪಟ್ಟ ನಂತರ ಅವರು ಈ ಪೋಸ್ಟ್ ಹಾಕಿದ್ದರು.

ಮಣಿಪುರದ ಬಿಜೆಪಿ ಉಪಾಧ್ಯಕ್ಷ ಉಷಾ ದೇಬನ್, ಪ್ರಧಾನ ಕಾರ್ಯದರ್ಶಿ ಪಿ. ಪ್ರೇಮಾನಂದ ಮಿಟ್ಟೆ ದೂರಿನಲ್ಲಿ ಬಂಧಿಸಲಾಗಿತ್ತು. ಈ ವ್ಯಕ್ತಿಯನ್ನು ಒಂದು ದಿನ ಕೂಡ ಜೈಲಿನಲ್ಲಿರಿಸಲು ಸಾಧ್ಯವಿಲ್ಲ ಎಂದು ಡಿವೈ ಚಂದ್ರಚೂಡ್ ಹೇಳಿದರು. ಮಣಿಪುರದ ಪ್ರಾದೇಶಿಕ ರಾಜಕೀಯ ಪಾರ್ಟಿಯ ಸಂಯೋಜಕ ಕೂಡ ಲೆಯ್ ಚೊಂಪಂ ಆಗಿದ್ದಾರೆ.

2018 ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಕ್ಕೆ ಕಿಶೋರ ಚಂದ್ರ ವಾಂಗ್‍ಖೇಂರನ್ನು ಬಂಧಿಸಲಾಗಿತ್ತು. 2019 ಎಪ್ರಿಲ್‍ನಲ್ಲಿ ನಂತರ ಇವರು ಜೈಲಿನಿಂದ ಬಿಡುಗಡೆಗೊಂಡಿದ್ದರು.