ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆ

0
403

ಸನ್ಮಾರ್ಗ ವಾರ್ತೆ

ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದ 42ನೇಯ ಅಧ್ಯಾಯವು ನವೆಂಬರ್ 1 2023 ರಂದು ಆರಂಭವಾಗಲಿದ್ದು ನವೆಂಬರ್ 12 ರ ವರೆಗೆ ನಡೆಯಲಿದೆ.

ಕರ್ನಾಟಕದ ನೆಚ್ಚಿನ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನವು ಸತತ ಏಳನೆಯ ಬಾರಿಗೆ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಾ ಭಾಗವಹಿಸುತ್ತಿದ್ದು ಯುಎಇ ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಅಂತರ್ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ದೇಶ ವಿದೇಶದ ವಿವಿಧ ಭಾಷೆಯ ಸಾವಿರಾರು ಪುಸ್ತಕ ಪ್ರಕಾಶಕರ ಮಳಿಗೆಗಳು ಪಾಳ್ಗೊಳ್ಳುತ್ತಿವೆ. ಲಕ್ಷಕ್ಕೂ ಮಿಕ್ಕಿ ಪುಸ್ತಕ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ.