ದೇಶದ್ರೋಹ ಪ್ರಕರಣ: ಸಂಸದ ಶಶಿ ತರೂರ್, ರಾಜ್‍ದೀಪ್ ಸರ್ದೇಸಾಯಿ ಸುಪ್ರೀಂಕೋರ್ಟಿಗೆ

0
559
ಶಶಿ ತರೂರ್, ರಾಜ್‌ದೀಪ್ ಸರ್ದೇಸಾಯಿ, ಜಾಫರ್ ಆಘಾ, ವಿನೋದ್ ಕೆ ಜೋಸ್, ಮೃಣಾಲ್ ಪಾಂಡೆ, ಪರೇಶ್ ನಾಥ್ ಮತ್ತು ಆನಂದ್ ನಾಥ್

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರಾಲಿಯ ವೇಳೆ ರೈತರು ಮೃತಪಟ್ಟ ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದರ ವಿರುದ್ಧ ತಮ್ಮ ಮೇಲೆ ಹಾಕಲಾದ ದೇಶದ್ರೋಹ ಪ್ರಕರಣ ಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಶಶಿ ತರೂರ್ , ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಮುಂತಾದವರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ.

ಪತ್ರಕರ್ತ ಮೃಣಾಲ್ ಪಾಂಡೆ, ಝಫರ್ ಆಗಾ, ಪರೇಶ್ ನಾಥ್, ಅನಂತ್ ನಾಥ್ , ವಿನೋದ್ ಜೋಸ್ ತಮ್ಮ ವಿರುದ್ಧ ಹಾಕಲಾದ ಪ್ರಕರಣಗಳನ್ನು ರದ್ದು ಪಡಿಸಬೇಕೆಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮೇಲೆ ಹಾಕಲಾದ ಕೇಸುಗಳು ಬಾಲಿಶವಾಗಿದೆ ಎಂದು ಅವರು ಕೋರ್ಟಿಗೆ ತಿಳಿಸಿದರು.

ಗಣರಾಜ್ಯೋತ್ಸವದ ದಿನ ಟ್ರಾಕ್ಟರ್ ರಾಲಿಯಲ್ಲಿ ರೈತರು ಗುಂಡೇಟಿಗೊಳಗಾಗಿ ಮೃತಪಟ್ಟಿದ್ದು ಎಂದು ತರೂ ಸಹಿತ ಕೆಲವರು ಟ್ವೀಟ್ ಮಾಡಿದ್ದಾರೆ ಎಂದು ಎಫ್‍ಐಆರ್ ನಲ್ಲಿದೆ. ಇದು ಕೆಂಪುಕೋಟೆಗೆ ಬಂದು ಧ್ವಜ ಹಾರಿಸಲು ಪ್ರೇರಣೆ ನೀಡಿತು ಎಂದು ಆರೋಪಿಸಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳಲ್ಲಿ ತರೂರ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.