ಬಂಧನ ಭೀತಿಯಲ್ಲಿ ಶೇಕ್ ಹಸೀನಾ: ಬಾಂಗ್ಲಾಕ್ಕೆ ಹಸ್ತಾಂತರಿಸುವುದೇ ಭಾರತ?

0
50

ಸನ್ಮಾರ್ಗ ವಾರ್ತೆ

ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ವಿರುದ್ಧ ಬಾಂಗ್ಲಾದೇಶದ ನ್ಯಾಯಾಲಯ ಜಾಮೀನು ರಹಿತ ಬಂಧನ ಆದೇಶವನ್ನು ಹೊರಡಿಸಿದೆ.

ನವಂಬರ್ 18ರಂದು ನ್ಯಾಯಾಲಯದ ಮುಂದೆ ಶೇಕ್ ಹಸೀನ ಅವರನ್ನು ಹಾಜರುಗೊಳಿಸಬೇಕು ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯುನಲ್ ಹೇಳಿದೆ. ಹಸೀನ ಅವರ 15 ವರ್ಷಗಳ ಆಡಳಿತದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದ್ದು ವಿರೋಧ ಪಕ್ಷಗಳ ನಾಯಕರನ್ನು ಕಾನೂನುಬಾಹಿರವಾಗಿ ಜೈಲಿನಲ್ಲಿ ಇಡಲಾಗಿದೆ ಮತ್ತು ನ್ಯಾಯಾಂಗೇತರ ಹತ್ಯೆಗಳನ್ನು ನಡೆಸಲಾಗಿದೆ ಎಂಬ ಆರೋಪ ಅವರ ಮೇಲಿದೆ.

ಹಾಗೆಯೇ ತನ್ನ ಸರಕಾರದ ವಿರುದ್ಧ ಪ್ರತಿಭಟನೆಗಳು ನಡೆದಾಗ ಅವರು ಬಲವಂತವಾಗಿ ಅವನ್ನು ದಮನಿಸಲು ಯತ್ನಿಸಿದ್ದರು ಮತ್ತು ಈ ಸಂದರ್ಭದಲ್ಲಿ ಹತ್ಯೆ ಕೂಡ ನಡೆಸಿದ್ದರು ಎಂದು ಆರೋಪಿಸಲಾಗಿದೆ.

77 ವರ್ಷದ ಹಸೀನಾ ಅವರು ಬಾಂಗ್ಲಾದೇಶದಿಂದ ಪಲಾಯನವಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಬಾಂಗ್ಲಾದೇಶ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಿದೆ.