ಟ್ರಂಪ್ ಮಾನಸಿಕ ಅಸ್ವಸ್ಥ: ಗಾಯಕಿ ರಿಹಾನಾ

0
550

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಅ.11: ಟ್ರಂಪ್ ಮಾನಸಿಕ ರೋಗಿ ಆಗಿದ್ದು ಅವರು ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿದ್ದಾರೆ ಎಂದು ಬಾರ್ಬಡಿಯನ್ ಗಾಯಕಿ ರಿಹಾನಾ ಹೇಳಿದರು. ವೇಗ್ ಫ್ಯಾಶನ್ ಮಾಸಿಕಕ್ಕೆ ನೀಡಿದ ಸಂದರ್ಶದನದಲ್ಲಿ ಬಂದೂಕು ವಶದಲ್ಲಿರುವ ಹಕ್ಕನ್ನು ಸಮರ್ಥಿಸುವ ಡೊನಾಲ್ಡ್ ಟ್ರಂಪ್ ವಿರುದ್ಧ ಮಾನಸಿಕ ರೋಗಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಚರ್ಮದ ಬಣ್ಣ ನೋಡಿ ಅಕ್ರಮಗಳನ್ನು ಟ್ರಂಪ್ ವರ್ಗೀಕರಿಸುತ್ತಾರೆ. ಅವರ ಈ ಸ್ವಭಾವದಲ್ಲಿ ಜನಾಂಗೀಯತೆ ಕಾಣಿಸಿದೆ. ಇದಕ್ಕಿಂತ ಮುಂಚೆ ಟ್ರಂಪ್ ರ್ಯಾ ಲಿಯಲ್ಲಿ ತನ್ನ ಹಾಡು ಉಪಯೋಗಿಸುವ ಲೈಸೆನ್ಸ್ ರದ್ದುಪಡಿಸಿದ್ದರು.