SIO ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಬಿ. ಅಫ್ವಾನ್ ಹೂಡೆ ಆಯ್ಕೆ

0
315

ಸನ್ಮಾರ್ಗ ವಾರ್ತೆ

ಉಡುಪಿ: ರಾಜ್ಯ SIO ಅಧ್ಯಕ್ಷರಾದ ಶೆಹಝಾದ್ ಅವರ ಮೇಲ್ವಿಚಾರಣೆಯಲ್ಲಿ ಇಂದಿಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಿನ ಅವಧಿಗೆ ಅಂದರೆ 2022-2023ನೇ ಸಾಲಿಗೆ ಬಿ.ಅಫ್ವಾನ್ ಹೂಡೆ ಅವರನ್ನು SIO ಉಡುಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಅಫ್ವಾನ್ ಅವರು ಕಾನೂನು ಪದವಿಧರರಾಗಿದ್ದು, ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಅಲ್ಲದೆ ಪ್ರಸ್ತುತ ದೇಶದ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯವಾದ “ಜಾಮಿಯ ಮಿಲ್ಲಿಯಾ ಇಸ್ಲಾಮಿಯಾ, ದೆಹಲಿ” ಇದರಲ್ಲಿ ಮಾನವ ಹಕ್ಕುಗಳ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿದ್ದು ಜಿಲ್ಲೆಯ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಕೈಜೋಡಿಸಿ ವಿವಿಧ ಜನಸ್ನೇಹಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಹಳೆ ವಿಧ್ಯಾರ್ಥಿ ಸಂಘದ ಸಂಚಾಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ಜಾಗೃತಿ ಅಭಿಯಾನಗಳ ಮೂಲಕ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವುದು, ವಿಧ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಪಡೆಯುವತ್ತ ಪ್ರೇರಪಿಸುವುದು ಮತ್ತು ಹೊಸ ಅವಕಾಶಗಳ ಮಾಹಿತಿ ನೀಡುವುದು, ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದು ಹಾಗೂ ವ್ಯವಸ್ಥೆಯ ತೊಡಕುಗಳನ್ನು ನಿವಾರಿಸಲು ಹೋರಾಟ ನಡೆಸುವುದು ಮುಂತಾದ ಚಟುವಟಿಕೆಗಳನ್ನು ತನ್ನ ಸಂಘಟನಾ ಸಂಗಾತಿಗಳೊಂದಿಗೆ ಸೇರಿಕೊಂಡು ನಿರ್ವಹಿಸುತ್ತಾ ಬಂದಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ SIO(ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ) ನ ಕೆಲವು ಶಾಖೆಗಳ ಸ್ಥಾನೀಯ ಅಧ್ಯಕ್ಷರುಗಳ ಆಯ್ಕೆಯೂ ನೆರವೇರಿಸಲಾಯಿತು. ಅದರಂತೆ ಎಸ್‌ಐಓ ಉಡುಪಿ ನಗರದ ಅಧ್ಯಕ್ಷರಾಗಿ ಅರ್ಬಾಝ್ ಅಹಮದ್, SIO ಮಲ್ಪೆ ಘಟಕದ ಅಧ್ಯಕ್ಷರಾಗಿ ಅಯಾನ್ ಮಲ್ಪೆ, SIO ಹೂಡೆ ಘಟಕದ ಅಧ್ಯಕ್ಷರಾಗಿ ಅಸ್ಜದ್ ಹೂಡೆ ಆಯ್ಕೆ ಮಾಡಲಾಯಿತು. ಅಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ರಾಜ್ಯ SIO ಕಾರ್ಯದರ್ಶಿ ಮಹಮ್ಮದ್ ನಾಸಿರ್ ಉಪಸ್ಥಿತರಿದ್ದರು.