ಇಸ್ಲಾಂ ಧರ್ಮ ಸ್ವೀಕರಿಸಿದ ದಕ್ಷಿಣ ಆಫ್ರಿಕದ ಕ್ರಿಕೆಟಿಗ ಬ್ರಿಯಾನ್ ಫಾಚ್ರ್ಯೂನ್

0
3099

ಸನ್ಮಾರ್ಗ ನ್ಯೂಸ್

ನ್ಯೂ ಸೌತ್ ವೇಲ್ಸ್: ದಕ್ಷಿಣ ಆಫ್ರಿಕದ ಕ್ರಿಕೆಟ್ ತಾರೆ ಬಿಯೊನ್ ಫಾಚ್ರ್ಯೂನ್ ಹಾಗೂ ಆತನ ಪತ್ನಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟ್ ಗ್ರಾಮ್‍ನಲ್ಲಿ ಸ್ವಯಂ ಅವರೇ ತನ್ನ ಮತಾಂತರವನ್ನು ಬಹಿರಂಗಪಡಿಸಿದ್ದಾರೆ. ಅವರ ಪತ್ನಿಯೂ ಇಸ್ಲಾಂ ಧರ್ಮ ಸ್ವೀಕರಿಸಿದ್ದು, ಹೊಸ ಹೆಸರು ಇಮಾದ್ ಎಂದು ಬಿಯೋನ್ ತಿಳಿಸಿದ್ದಾರೆ. ಇಬ್ಬರಿಗೂ ಅವರ ಸಹ ಆಟಗಾರ ತಬ್ರೇಝ್ ಶಂಸಿಯ ಪತ್ನಿ ಖದೀಜಾ ಶಂಸಿ ಶುಭಾಶಯ ಸಲ್ಲಿಸಿದರು.

ಸ್ವ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ 26 ವರ್ಷದ ಫಾಚ್ರ್ಯೂನ್ ಹೇಳಿದರು. ದಕ್ಷಿಣಾಫ್ರಿಕದಲ್ಲಿ ಒಂದು ಏಕದಿನ ಮತ್ತು ಏಳು ಟ್ವೆಂಟಿ 20 ಕ್ರಿಕೆಟ್ ಪಂದ್ಯದಲ್ಲಿ ಅವರು ಆಡಿದ್ದಾರೆ. ಈ ತಿಂಗಳು ಪಾಕಿಸ್ತಾನದ ವಿರುದ್ಧ ನಡೆದ ಟ್ವೆಂಟಿ 20ಯಲ್ಲಿಯೂ ಬಿಯಾನ್ ಸೌತ್ ಆಫ್ರಿಕ ತಂಡದ ಸದಸ್ಯನಾಗಿದ್ದರು.

ಬಿಯಾನ್‍ರಿಗಿಂತ ಮೊದಲು 2011ರಲ್ಲಿ ಫಾಸ್ಟ್ ಬೌಲರ್ ವೇಯ್ನ್ ಪಾರ್ನೆಲ್ ಇಸ್ಲಾಮ್ ಧರ್ಮ ಸ್ವೀಕರಿಸಿ ವಲೀದ್ ಎಂಬ ಹೆಸರನ್ನು ಇಟ್ಟುಕೊಂಡಿದ್ದರು. ಬಿಯಾನ್ ಇಸ್ಲಾಂ ಧರ್ಮ ಸ್ವೀಕರಿಸಿದ ಎರಡನೇ ಕ್ರಿಕೆಟಿಗ.